ಭುವನೇಶ್ವರಿ ಭಾವಚಿತ್ರಕ್ಕೆ ಭುಗಿಲೆದ್ದ ವಿವಾದ

Public TV
2 Min Read

ಗದಗ: ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಅಖಂಡ ಕರ್ನಾಟಕ ಹೋರಾಟಕ್ಕೆ ಸ್ಪೂರ್ತಿಯಾಗಿದ್ದು, ಕರ್ನಾಟಕ ಮಾತೆ ಭುವನೇಶ್ವರಿ ಭಾವಚಿತ್ರ. ಸರ್ಕಾರ ಈಗ ಅಧಿಕೃತವಾಗಿ ಕನ್ನಡ ಭುವನೇಶ್ವರಿ ಚಿತ್ರ ಆರಾಧನೆಗೆ ಮುಂದಾಗುತ್ತಿದೆ. ಈ ವೇಳೆ ಹಲವೆಡೆ ವಿರೋಧದ ಕೂಗು ಕೇಳಿ ಬರುತ್ತಿದೆ. ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಕುಟುಂಬಸ್ಥರು, ಹಿರಿಯ ಸಾಹಿತಿಗಳು, ಕಲಾವಿದರು, ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬಸ್ಥರು, ಕನ್ನಡಪರ ಸಂಘಟನಾಕಾರರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆ ಕರ್ನಾಟಕ ಏಕೀಕರಣಕ್ಕೆ ಅನೇಕ ಮಹಾತ್ಮರನ್ನು ತೆತ್ತ ಜನ್ಮಭೂಮಿ. ಈಗ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. 67 ವರ್ಷಗಳ ನಂತರ ಅಧಿಕೃತವಾಗಿ ಭುವನೇಶ್ವರಿ ಆರಾಧನೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಗದಗ ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ಹಲವಾರು ವಿರೋಧ, ಅಪಸ್ವರಗಳು ಶುರುವಾಗಿದೆ. ಕರ್ನಾಟಕ ಏಕೀಕರಣ ಹೋರಾಟ ಸಂದರ್ಭದಲ್ಲಿ ಕರ್ನಾಟಕ ಮಾತೆ ಭುವನೇಶ್ವರಿ ಭಾವಚಿತ್ರ ಹೇಗಿರಬೇಕು ಎಂಬ ಪರಿಕಲ್ಪನೆ ಮಾಡಿದವರೇ, ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರು.

ದೊಡ್ಡಮೇಟಿ ಅವರ ಕಲ್ಪನೆಯನ್ನು ಗದಗದ ಕಲಾವಿದ ಸಿ.ಎನ್ ಪಾಟೀಲ್ ಅವರು 1952 ರಲ್ಲಿ ತೈಲ ವರ್ಣದಲ್ಲಿ ಚಿತ್ರ ಬಿಡಿಸಿದರು. ಕರ್ನಾಟಕ ನಕಾಶೆಯಲ್ಲಿ ಸುಂದರವಾಗಿ ಮೂಡಿ ಬಂದ ಭಾವಚಿತ್ರ ಇದಾಗಿದೆ. ಭುವನೇಶ್ವರಿ ಭಾವಚಿತ್ರದ ಸುತ್ತಲು ಮೈಸೂರು ಅರಮನೆ, ಚಾಮುಂಡೇಶ್ವರಿ, ಗೊಮ್ಮಟೇಶ್ವರ ವಿಗ್ರಹ, ಹಂಪಿ ವಿರೂಪಾಕ್ಷ ಗೋಪುರ ವಿಗ್ರಹ, ಜೋಗ ಜಲಪಾತ, ಶೃಂಗೇರಿ ಶಾರದಾ ಪೀಠ, ಅತ್ತಿಮಬ್ಬೆ ತಾಳೆಗರಿ, ಅರಣ್ಯ, ನದಿಗಳು ಸೇರಿದಂತೆ ಇನ್ನಿತರ ಪ್ರಮುಖ ಪ್ರವಾಸಿ ಚಿತ್ರಗಳಿವೆ. ಸರ್ಕಾರ ಇದನ್ನೇ ಅಂತಿಮವಾಗಿ ಘೋಷಣೆ ಮಾಡಬೇಕು ಎಂದು ದೊಡ್ಡಮೇಟಿ ಕುಟುಂಬಸ್ಥರು ಹಾಗೂ ಕನ್ನಡಪರ ಸಂಘಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಡ ದೇವಿಯ ಭಾವಚಿತ್ರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

67 ವರ್ಷದ ನಂತರ ಅಧಿಕೃತವಾಗಿ ಸರ್ಕಾರ ಕನ್ನಡ ದೇವತೆ ಆರಾಧನೆಗೆ ಮುಂದಾಗಿದೆ. ಏಕರೂಪತೆಗಾಗಿ ಲಲಿತಕಲಾ ಅಕಾಡೆಮಿಯಿಂದ 6 ಜನ ಸದಸ್ಯರ ಸಮಿತಿ ರಚಿಸಿದ್ದಾರೆ. ಕನ್ನಡ ಮಾತೆ ಹೇಗಿರಬೇಕೆಂದು ಆ ಸಮಿತಿ ಈಗ ಭಾವಚಿತ್ರ ಬಿಡಿಸಿ ಸರ್ಕಾರಕ್ಕೆ ಒಪ್ಪಿಸಿದೆ. ಆದರೆ ಇದು ಸರಿಯಾದ ನಿರ್ಧಾರವಲ್ಲ. ಸಮಿತಿ ರಚನೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆ ಸೇರಿದಂತೆ ಎಲ್ಲಾ ವಲಯ ಒಗ್ಗೂಡಿಸಿ ಸಮಿತಿ ರಚಿಸಬೇಕಿತ್ತು. ಆದರೆ ಲಲಿತಕಲಾ ಅಕಾಡೆಮಿ ರಚಿಸಿದ ಸಮಿತಿಯಲ್ಲಿ ಹೆಚ್ಚು ಒಂದೇ ವರ್ಗದವರಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಬಾರದು. ಅಂದಾನಪ್ಪ ದೊಡ್ಡಮೇಟಿ ಅವರ ತೈಲ ವರ್ಣದ ಭಾವಚಿತ್ರ ಘೋಷಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಗದಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್, ದೊಡ್ಡಮೇಟಿ ಕುಟುಂಬಸ್ಥರು, ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬಸ್ಥರು, ಕನ್ನಡ ಪರ ಸಂಘಟನೆ ಕಾರ್ಯಕರ್ತರು ಸಾಥ್ ನೀಡಿದ್ದಾರೆ.

ಈ ಕನ್ನಡ ತಾಯಿ ಭುವನೇಶ್ವರಿ ಜಕ್ಕಲಿ ಗ್ರಾಮದ ದೊಡ್ಡಮೇಟಿ ಅವರ ಮನೆಯಲ್ಲಿ ನಿತ್ಯವೂ ಪೂಜನೀಯವಾಗಿದ್ದಾಳೆ. ಈ ಚಿತ್ರ ತಯಾರಾಗಿದ್ದು 1952 ರಲ್ಲಿ. ಡಿಜಿಟಲ್ ಯುಗಕ್ಕೆ ಕಾಲಿಟ್ಟಿರುವ ಪ್ರಚಲಿತದ ಭುವನೇಶ್ವರಿಯು ತನ್ನ ಕಳೆಯನ್ನು ಕಳೆದುಕೊಂಡಿದ್ದಾಳೆ. ಈಗಿನ ಭುವನೇಶ್ವರಿ ಭಾವಚಿತ್ರ ಅವೈಜ್ಞಾನಿಕವಾಗಿದ್ದು, ಅಪೂಜನಿಯವಾಗಿದೆ ಎಂಬುದು ಗದಗ ಜಿಲ್ಲೆ ದೊಡ್ಡಮೇಟಿ ಕುಟುಂಬದವರ ಆರೋಪವಾಗಿದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *