ನನಗೇನಾದ್ರೂ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡಿತಿದ್ದೆ- ಮೋದಿ ವಿರುದ್ಧ ಕೈ ಮುಖಂಡನ ವಿವಾದಾತ್ಮಕ ಹೇಳಿಕೆ

Public TV
1 Min Read

ಚಿತ್ರದುರ್ಗ: ಚುನಾವಣೆ (Lok Sabha Elections 2024) ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಪ್ರಧಾನಿ ಮೋದಿ  (Narendra Modi) ವಿರುದ್ಧ ಕಾಂಗ್ರೆಸ್ (Congress) ಮುಖಂಡ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ (G.S Manjunath) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿರಿಯೂರಿನಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗನಾಗಿ ಈ ಮಾತನ್ನು ಹೇಳುತ್ತಿಲ್ಲ. ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ನೀವೆಲ್ಲರೂ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಪ್ರಶ್ನೆ ಮಾಡುವುದು ಕಲಿಯದಿದ್ದರೆ, ಮತ ಹಾಕಲು ಅರ್ಹರಲ್ಲ ಎಂದಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

ಇನ್ನೇನೂ 15-20 ದಿನಗಳಲ್ಲಿ ಚುನಾವಣೆ ಆರಂಭ ಆಗಲಿದೆ. ಈಗ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಕ್ಕೆ ನಮ್ಮ ಜನರಿಗೆ ಖುಷಿ ಎಂದು ವ್ಯಂಗ್ಯವಾಡಿದ ಅವರು, ನೇರವಾಗಿ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೆ ಟೀಕಿಸಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

Share This Article