– ದಿಢೀರ್ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಡೆಡ್ಲೈನ್
– 33 ಸಾವಿರ ಕೋಟಿ ರೂ. ಬಿಡುಗಡೆ ಮಾಡದಿದ್ದರೆ ಸತ್ಯ ಬಹಿರಂಗ
ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಕಮಿಷನ್ ಬಾಂಬ್ (Commission Bomb) ಈಗ ಕಾಂಗ್ರೆಸ್ (Congress) ಸರ್ಕಾರಕ್ಕೂ ಬಿಸಿ ತುಪ್ಪವಾಗಿದೆ. ಬಾಕಿ ಇರುವ 33 ಸಾವಿರ ಕೋಟಿ ರೂ. ಹಣ ಬಿಡುಗಡೆಗೆ ಇವತ್ತು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಗುತ್ತಿಗೆದಾರರ ಸಂಘ (Karnataka Contractors Assiation) ಸರ್ಕಾರಕ್ಕೆ ಡೆಡ್ಲೈನ್ ವಿಧಿಸಿ ಹೊಸ ಬಾಂಬ್ ಸಿಡಿಸಿದೆ.
ಮುಂದಿನ ಡಿಸೆಂಬರ್ನೊಳಗೆ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೆ, ಎಲ್ಲ ಸತ್ಯವನ್ನು ಬಹಿರಂಗ ಮಾಡೋದಾಗಿ ಎಚ್ಚರಿಕೆ ಕೊಟ್ಟಿದೆ. ನಾವು ಎಲ್ಲವನ್ನೂ ಬಹಿರಂಗಪಡಿಸಿದರೆ ಮುಖ್ಯಮಂತ್ರಿಗಳೇ ಮುಂದೆ ಕಷ್ಟವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿ- ರಾಯಚೂರಿನ PDO ಅಮಾನತು
ಈ ಸರ್ಕಾರದಲ್ಲಿ ಕಮಿಷನ್ ಇಲ್ಲ ಎಂದು ಹೇಳುವುದಿಲ್ಲ. ಡಿಸೆಂಬರ್ನೊಳಗೆ ಹಣ ಬಿಡುಗಡೆ ಆಗದಿದ್ದರೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿಯಾಗಿ ಎಲ್ಲ ಮಾಹಿತಿಯನ್ನೂ ನೀಡುವುದಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇರಾನೇರಾ ಎಚ್ಚರಿಕೆ ನೀಡಿದ್ದಾರೆ.
ಆರೋಪಗಳು ಏನು?
ಗುತ್ತಿಗೆದಾರರ ಸಂಘಕ್ಕೆ 33 ಸಾವಿರ ಕೋಟಿ ರೂ. ಬರಬೇಕಿದೆ. ಅದರಲ್ಲೂ ಡಿಕೆ ಶಿವಕುಮಾರ್ ಅವರ ನೀರಾವರಿ ಇಲಾಖೆಯಲ್ಲೇ 12 ಸಾವಿರ ಕೋಟಿ ರೂ. ಬಾಕಿ ಇದೆ. ಸತೀಶ್ ಜಾರಕಿಹೊಳಿ ಅವರ ಲೋಕೋಪಯೋಗಿ ಇಲಾಖೆ 9 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದನ್ನೂ ಓದಿ: ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರ ಸಾವು – ಆಫ್ಘನ್ ಗಡಿಯ ಉತ್ತರ ವಜೀರಿಸ್ತಾನದಲ್ಲಿ ದಾಳಿ
ಸಂತೋಷ್ ಲಾಡ್, ಬೈರತಿ ಇಲಾಖೆಯಲ್ಲಿ ಕಮಿಷನ್ಗೆ ಬೇಡಿಕೆಯಿದೆ. ಟೆಂಡರ್ ಪಡೆಯುವ ಮುನ್ನವೇ ಅಧಿಕಾರಿಗಳಿಂದ 10-15% ಕಮಿಷನ್ಗೆ ಒತ್ತಡ ಬರುತ್ತಿದೆ. ಈಗಾಗಲೇ ಸಚಿವರಿಗೂ ಕಮಿಷನ್ ಬಗ್ಗೆ ಮಾಹಿತಿ ನೀಡಲಾಗಿದೆ. ಶೇ.70ರಷ್ಟು ಶಾಸಕರು ಕಮಿಷನ್ಗಾಗಿ ಬೇಡಿಕೆ ಇಡುತ್ತಿದ್ದಾರೆ. ಹೊರರಾಜ್ಯದವರಿಗೆ ಅನುಕೂಲ ಮಾಡಿಕೊಡಲು 38 ಕೋಟಿ ರೂ. ಪ್ಯಾಕೇಜ್ ಟೆಂಡರ್ ಒಟ್ಟಿಗೆ ಮಾಡಿಕೊಟ್ಟಿದ್ದಾರೆ.