ಬೆಂಗಳೂರು: ಸಾಲು ಸಾಲು ರಜೆಯಿದ್ದ ಹಿನ್ನೆಲೆ ಜನದಟ್ಟಣೆ ಜಾಸ್ತಿಯಾಗುವ ಸಾಧ್ಯತೆಯಿದ್ದು, ಹಳದಿ ಮಾರ್ಗದ ಮೆಟ್ರೋ (Yellow Metro) ಸೋಮವಾರ (ಆ.18) ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾರಂಭಿಸಲಿದೆ.ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ
ಆಗಸ್ಟ್ 18 2025ರ, ಸೋಮವಾರದಂದು ಹಳದಿ ಮಾರ್ಗದ ಮೆಟ್ರೋ ಸೇವೆ, ಮುಂಜಾನೆ 5:00ಗೆ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ.
— ನಮ್ಮ ಮೆಟ್ರೋ (@OfficialBMRCL) August 17, 2025
ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಾಲು ಸಾಲು ರಜೆಯಿದ್ದ ಹಿನ್ನೆಲೆ ಹೆಚ್ಚಿನವರು ಊರಿಗೆ ತೆರಳಿರುತ್ತಾರೆ. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಯೆಲ್ಲೋ ಮೆಟ್ರೋ ಸೋಮವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರಾರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ.
Attention passengers: Yellow Line Services to begin at 5:00 am on Monday 18th August 2025
Check the media release for more details. pic.twitter.com/s9ZmCQxQ2z— ನಮ್ಮ ಮೆಟ್ರೋ (@OfficialBMRCL) August 17, 2025
ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆದುಕೊಳ್ಳಬೇಕು. ಇನ್ನೂ ಈ ಹಿಂದೆ ಘೋಷಿಸಿದಂತೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಿಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ. ಹಳದಿ ಮಾರ್ಗದ ಮೆಟ್ರೋ ಮಂಗಳವಾರ (ಆ.19) ಎಂದಿನಂತೆ ಬೆಳಿಗ್ಗೆ 6:30ಕ್ಕೆ ಕಾರ್ಯರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ರಿಸಲ್ಟ್ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ