ಮುಂದುವರೆದ ‘ಕಾಟೇರ’ ಅಬ್ಬರ: 2ನೇ ದಿನದ ಕಲೆಕ್ಷನ್ ಜೋರು

Public TV
1 Min Read

ರ್ಶನ್ ನಟನೆಯ ಕಾಟೇರ ಸಿನಿಮಾದ ಅಬ್ಬರ ಎರಡನೇ ವಾರಕ್ಕೂ ಮುಂದುವರೆದಿದೆ. ಎರಡನೇ ದಿನದ ಕಲೆಕ್ಷನ್ 17.35 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೊದಲ ದಿನ ಮತ್ತು ಎರಡನೇ ದಿನ ಸೇರಿ ಒಟ್ಟು ಎರಡು ದಿನಕ್ಕೆ 37.14 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದೆ.

ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ (Box Office) ಹರಿದು ಬಂದಿತ್ತು. ಕಾಟೇರ ಸಿನಿಮಾದ ಮೊದಲ ದಿನದ ಗಳಿಕೆ ಅಂದಾಜು 19.79 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ (Kaatera Cinema) ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಚಕ್ರವರ್ತಿಯ ಅಬ್ಬರ ಜೋರಾಗಿದೆ. ಮೊನ್ನೆಯಿಂದ ಸಿನಿಮಾ ಥಿಯೇಟರ್, ಮಾಲ್‌ಗಳ ಮುಂದೆ ಕಿಕ್ಕಿರಿದು ನಿಂತಿರುವ ಅಭಿಮಾನಿಗಳು (Darshan Fans) ದರ್ಶನ್‌ ಕಟೌಟ್‌ಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಡಿಬಾಸ್‌ ಡಿಬಾಸ್‌ ಎಂದು ಜಯಘೋಷ ಹಾಕುತ್ತಾ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಮೊದಲ ದಿನ ಬೆಂಗಳೂರಿನ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿ ಹೊರ ಬಂದ ಅಭಿಮಾನಿಗಳು ಸಾರಥಿಗೆ ಜೈಕಾರ ಕೂಗತೊಡಗಿದ್ದಾರೆ. ಈ ನಡುವೆ ಕಾಟೇರಮ್ಮನ ಗುಡಿ ಮಾಡಿ ದೇವಿ ಪ್ರತಿಮೆ ಸ್ಥಾಪಿಸಿರುವ ದೃಶ್ಯಗಳು ಕಂಡುಬಂದಿವೆ.

 

ದರ್ಶನ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಟೇರ ದರ್ಬಾರ್‌ ಗುರುವಾರ ಮಧ್ಯರಾತ್ರಿಯಿಂದಲೇ ಶುರುವಾಗಿದೆ. ಮೊದಲ ದಿನ ರಾಜ್ಯದ 21 ಕಡೆ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಿಸಲಾಗಿತ್ತು. 43 ಥಿಯೇಟರ್‌ಗಳಲ್ಲಿ ಮುಂಜಾನೆ 3 ಗಂಟೆಯಿಂದ, 77 ಥಿಯೇಟರ್‌ಗಳಲ್ಲಿ ಬೆಳಗ್ಗಿನ ಜಾವ 4 ಗಂಟೆಯಿಂದ ಶೋ ಆರಂಭವಾಗಿತ್ತು. ಸೂರ್ಯೋದಯವಾಗುವುದಕ್ಕೂ ಮುನ್ನವೇ ಕಾಟೇರ 335 ಶೋಗಳಲ್ಲಿ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದೆ. ಮೊದಲ ದಿನ 1,600 ಶೋಗಳ ಪ್ರದರ್ಶನಕ್ಕೆ ಸಜ್ಜಾಗಿತ್ತು.

Share This Article