ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಸ್ಪರ್ಧಿ: ಆಸ್ಪತ್ರೆಗೆ ದಾಖಲು

Public TV
1 Min Read

ಬಿಗ್ ಬಾಸ್ ಮನೆಯಲ್ಲಿ ಆತಂಕಕಾರಿ ಬೆಳವಣಿಗೆ ನಡೆದಿದ್ದು, ವೀಕೆಂಡ್ ಎಪಿಸೋಡ್ ನಲ್ಲಿ ಸ್ಪರ್ಧಿ ಆಯೆಶಾ ಖಾನ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ ವೀಕೆಂಡ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಆಯೆಶಾ ಎಂಟ್ರಿನೆ ಸಖತ್ತಾಗಿತ್ತು.

ಹಿಂದಿ ಬಿಗ್ ಬಾಸ್ ಶೋನಲ್ಲಿ ವಿಕ್ಕಿ ಜೈನ್, ಖಾನ್ಜಾದಿ, ನೀಲ್ ಭಟ್, ಅಭಿಷೇಕ್ ಕುಮಾರ್, ಅಂಕಿತಾ ಲೋಖಂಡೆ, ಮುನಾವರ್ ಫರುಕಿ, ಜಿಗ್ನಾ ವೋರಾ ಹೀಗೆ ಮುಂತಾದ ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲೂ ಗಂಡ ಹೆಂಡತಿ ಜೋಡಿಯೂ ಮನೆಯೊಳಗೆ ಇದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಮಿಡಿಯನ್ ಮುನಾವರ್ ಫರುಕಿ (Munawar Faruqui)ಕೂಡ ಇದ್ದಾರೆ. ಅವರ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡ ಹುಡುಗಿಯೊಬ್ಬಳು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಅವರೇ ಈ ಆಯೆಶಾ ಆಗಿದ್ದರು.

ಹೆಸರಾಂತ ಸ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್ ಫಾರುಕಿ ವಿರುದ್ಧ ಈಗಾಗಲೇ ಸಾಕಷ್ಟು ಆರೋಪ ಮಾಡಿರುವ ಆಯೆಶಾ ಖಾನ್ (Ayesha Khan), ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ವಾಹಿನಿಯು ಪ್ರೊಮೊವನ್ನು ಹಂಚಿಕೊಂಡಿತ್ತು, ಅಲ್ಲಿಯೂ ಆಯಶಾ ರಿವೇಂಜ್ ತೀರಿಸಿಕೊಳ್ಳುವಂತಹ ಮಾತುಗಳನ್ನು ಆಡಿದ್ದರು.

 

ತಾನು ಫಾರುಕಿ ಅವರ ಮಾಜಿ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡಿರುವ ಆಯಶಾ ಖಾನ್, ಮುನಾವರ್ ಅವರ ಮುಖವಾಡ ಕಳಚುತ್ತೇನೆ ಎಂದು ಗದರಿದ್ದಾರೆ. ಆತ ನನ್ನೊಂದಿಗೆ ಮಾಡಿರೋ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಆ ಕಾರಣಕ್ಕಾಗಿ ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಾಗಿ ಆಯಶಾ ಪ್ರೊಮೋದಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಆಯಶಾಗೆ ಫಾರುಕ್ ಐ ಲವ್ ಯೂ ಎಂದು ಹೇಳಿದ್ದರಂತೆ. ನಿಮ್ಮಂತಹ ಹುಡುಗಿ ಜೊತೆನೇ ಮದುವೆ ಆಗಬೇಕು ಎಂದು ಮಾತನಾಡಿದ್ದರಂತೆ. ಅದೆಲ್ಲವನ್ನೂ ಅವರ ಬಾಯಿಂದಾನೇ ಹೇಳಿಸ್ತೇನೆ ಅಂದಿದ್ದರು ಆಯೆಶಾ.

Share This Article