ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್

Public TV
1 Min Read

ಮುಂಬೈ: ಪುಣೆ-ಅಹ್ಮದ್‍ನಗರ ಹೆದ್ದಾರಿಯಲ್ಲಿ ಕಂಟೈನರ್ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು 2 ಕಿಲೋಮೀಟರ್‍ವರೆಗೆ ಎಳೆದೊಯ್ದಿದೆ.

ಪುಣೆ-ಅಹ್ಮದ್‍ನಗರ ಹೆದ್ದಾರಿಯ ಶಿಕ್ರಾಪುರ ಬಳಿ ಶನಿವಾರ ಈ ಘಟನೆ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಅದೃಷ್ಟವಶಾತ್ ಕಂಟೈನರ್ ಟ್ರಕ್ ಸುಮಾರು 2 ಕಿಲೋಮೀಟರ್‌ವರೆಗೂ ಕಾರನ್ನು ಎಳೆದದೊಯ್ದಿದ್ದರೂ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

ಸದ್ಯ ಈ ಅಪಘಾತದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದು ನಂತರ ಕಾರನ್ನು ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದಾಗಿದೆ. ಇನ್ನೂ ಈ ದೃಶ್ಯವನ್ನು ರಸ್ತೆ ಬದಿಯಲ್ಲಿಯೇ ಇದ್ದ ಜನರು ಕಂಡು ಬೆಚ್ಚಿಬೆದ್ದಿದ್ದಾರೆ. ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರ – ಪರ ಪುರುಷರೊಂದಿಗೂ ಸಂಬಂಧ ಹೊಂದುವಂತೆ ಆರೋಪಿ ತಾಯಿ ಒತ್ತಾಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *