ಮಹಿಳೆಯ ಸರ ಕಸಿದು ಓಡ್ತಿದ್ದ ಕಳ್ಳನನ್ನು ಒಂದು ಕಿಮೀ ಬೆನ್ನತ್ತಿ ಹಿಡಿದ ಕಾನ್ಸ್‌ಟೇಬಲ್!

1 Min Read

ಬೆಂಗಳೂರು: ವಿಜಯನಗರ (Vijayanagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಸರ ಕಸಿದು ಓಡ್ತಿದ್ದ ಕಳ್ಳನನ್ನು ಕಾನ್ಸ್‌ಟೇಬಲ್ ಒಬ್ಬರು ಒಂದು ಕಿಮೀ ಬೆನ್ನತ್ತಿ ಹಿಡಿದಿದ್ದಾರೆ.

ಫೆ.5 ರಂದು ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್ ಹನುಮಂತ ಪುಟಾಣಿ ಸುಮಾರು ಒಂದು ಕಿಲೋಮೀಟರ್ ದೂರ ಓಡಿ ಬೆನ್ನತ್ತಿ ಹಿಡಿದಿದ್ದರು. ಇದನ್ನೂ ಓದಿ: ತೀರ್ಥಹಳ್ಳಿ | ಲವ್‌ ಪ್ರಪೋಸ್‌ ಒಪ್ಪದ ಯುವತಿಗೆ ಬಿಯರ್‌ ಬಾಟಲಿಯಲ್ಲಿ ಇರಿದ ಪಾಗಲ್‌ ಪ್ರೇಮಿ!

ದಾಕ್ಷಾಯಣಿ ಎಂಬವರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಸೈಯದ್ ಜಾಫರ್ ಎಂಬ ಆರೋಪಿಯನ್ನು ಹನುಮಂತ ಪುಟಾಣಿ  ಬೆನ್ನಟ್ಟಿ ಹಿಡಿದಿದ್ದರು. ಆ ದಿನ ಕೆಲಸ ಮುಗಿಸಿ ಹನುಮಂತ ಅವರು ತಮ್ಮ ಮನಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮಹಿಳೆಯ ಚಿನ್ನದ ಸರ ಕಸಿದು ಆರೋಪಿ ಎಸ್ಕೇಪ್ ಆಗ್ತಿದ್ದ. ಈ ವೇಳೆ ಆರೋಪಿಯನ್ನು ಬೆನ್ನತ್ತಿ ಹಿಡಿದು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದರು.

ಬಂಧಿತ ಆರೋಪಿಯಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಹನುಮಂತ ಪುಟಾಣಿಯವರ ಕರ್ತವ್ಯ ನಿಷ್ಠೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ಸರ ಕಳೆದುಕೊಂಡ ಮಹಿಳೆ ದಾಕ್ಷಯಿಣಿ ಕೂಡ ಪೊಲೀಸ್ ಪೇದೆ ಹನುಮಂತ ಪುಟಾಣಿ ಅವರ ಕರ್ತ್ಯವವನ್ನ ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಷ್ಟಿತ ವಿವಿ ವಿದ್ಯಾರ್ಥಿನಿ ಹಾಸ್ಟೆಲ್‌ನ 14ನೇ ಮಹಡಿಯಿಂದ ಬಿದ್ದು ಸಾವು!

Share This Article