ವೈರಲ್ ಆಯ್ತು ಪೊಲೀಸ್ ಪೇದೆಯ ವಿಡಿಯೋ

Public TV
1 Min Read

– ಹರಿದು ಬಂತು ಅಭಿನಂದನೆಯ ಮಹಾಪೂರ

ಗುವಾಹಟಿ: ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೇದೆಯ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಮಹಾಪೂರವೇ ಹರಿದು ಬರುತ್ತಿದೆ.

ಅಸ್ಸಾಂ ಪೊಲೀಸ್ ಪೇದೆ ಮಿಥುನ್ ದಾಸ್ ಬಿರುಸಿನ ಮಳೆಯನ್ನು ಲೆಕ್ಕಿಸದೇ ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ. ಭಾನುವಾರ ಗುವಾಹಟಿ ವೃತ್ತದಲ್ಲಿ ಸಂಚಾರ ನಿಯಂತ್ರಣ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ವೃತ್ತದ ಮಧ್ಯಭಾಗದಲ್ಲಿ ಕೇವಲ ಕಟ್ಟೆಯೊಂದನ್ನು ಮಾತ್ರ ನಿರ್ಮಿಸಲಾಗಿದ್ದರಿಂದ ಅಲ್ಲಿಯೇ ನಿಂತು ಸಂಚಾರ ನಿಯಂತ್ರಣದ ಕೆಲಸವನ್ನು ಮಿಥುನ್ ಮಾಡುತ್ತಿದ್ದರು. ಈ ವೇಳೆ ಜೋರಾಗಿ ಮಳೆ ಬಂದರೂ ಅಲ್ಲಿಯೇ ನಿಂತು ಎಲ್ಲ ಕರ್ತವ್ಯ ಪ್ರಜ್ಞೆಯನ್ನು ಮಿಥುನ್ ಮೆರೆದಿದ್ದಾರೆ.

ಈ ವಿಡಿಯೋವನನ್ನ ಅಸ್ಸಾಂ ಪೊಲೀಸ್ ಅಧಿಕಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ವಿಡಿಯೋವನ್ನು ಅಸ್ಸಾಂ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡು ಮಿಥುನ್ ದಾಸ್ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಲಾಗಿದೆ.

ಇದೇ ವಿಡಿಯೋವನ್ನು ರಿಟ್ವೀಟ್ ಮಾಡಿಕೊಂಡಿರುವ ಅಸ್ಸಾಂ ಡಿಜಿಪಿ ಕುಲಾ ಸೈಕಿಯಾ, ಮಿಥುನ್ ದಾಸ್ ಜೊತೆ ಮಾತನಾಡಿ ಪ್ರಶಂಸಿಸಲಾಗಿದೆ. ಯಾವುದೇ ಪ್ರಚಾರದ ಮೊರೆ ಹೋಗದೇ ಪ್ರತಿನಿತ್ಯ ಕಾರ್ಯನಿರ್ವಹಿಸುವ ಅಧಿಕಾರಿಗಳು ಬಹು ಜನರಿಗೆ ಮಾದರಿಯಾಗುತ್ತಾರೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *