ಕರೆಂಟ್ ಬಿಲ್ ಕಟ್ಟದ್ದಕ್ಕೆ ಕನೆಕ್ಷನ್ ಕಟ್ – ಸಿಬ್ಬಂದಿ ಜೊತೆ ಗಲಾಟೆ, ವಯರ್ ಕಿತ್ತುಕೊಂಡು ಹೋದ ಮಹಿಳೆಯರು

Public TV
1 Min Read

ಯಾದಗಿರಿ: ವಿದ್ಯುತ್ ಬಿಲ್ (Electricity bill) ಕಟ್ಟಿಲ್ಲ ಎಂದು ಕನೆಕ್ಷನ್ ಅನ್ನೇ ಕತ್ತರಿಸಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಜೆಸ್ಕಾಂ (JESCOM) ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗುಕೊಂಡಿರುವ ಘಟನೆ ಯಾದಗಿರಿಯಲ್ಲಿ (Yadgir) ನಡೆದಿದೆ.

ತಾಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ವಿದ್ಯುತ್ ಕನೆಕ್ಷನ್ ಕಟ್ ಮಾಡಿದ್ದಕ್ಕೆ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನವರು ಕರೆಂಟ್ ಬಿಲ್ ಕಟ್ಟಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವ್ಯಾರೂ ಬಿಲ್ ಕಟ್ಟೋದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವದ ಬೆನ್ನಲ್ಲೇ ನೆಟ್ಟಾರು ಪತ್ನಿಗೆ ಸರ್ಕಾರಿ ನೌಕರಿಯಿಂದ ಕೊಕ್

ಗ್ರಾಮದಲ್ಲಿ 6-7 ಕುಟುಂಬಸ್ಥರು 5-10 ಸಾವಿರದಷ್ಟು ವಿದ್ಯುತ್ ಬಿಲ್ ಅನ್ನು ಬಾಕಿ ಇಟ್ಟಿದ್ದಾರೆ. ಈ ಕಾರಣಕ್ಕೆ ಜೆಸ್ಕಾಂ ಸಿಬ್ಬಂದಿ ಲೈನ್ ಕಟ್ ಮಾಡಿದ್ದಾರೆ. ವಯರ್ ಅನ್ನು ಕತ್ತರಿಸಿ ತಮ್ಮ ವಾಹನದಲ್ಲಿ ಇರಿಸಿದಾಗ ಮಹಿಳೆಯರು ಸ್ಥಳದಲ್ಲಿ ಗಲಾಟೆ ನಡೆಸಿ ವಾಹನದಲ್ಲಿದ್ದ ವಯರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಮಹಿಳೆಯರ ರಂಪಾಟಕ್ಕೆ ಜೆಸ್ಕಾಂ ಸಿಬ್ಬಂದಿ ಸುಸ್ತಾಗಿದ್ದಾರೆ. ಇದನ್ನೂ ಓದಿ: ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

Share This Article