ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ

Public TV
1 Min Read

ಬೆಂಗಳೂರು: ಜೆಡಿಎಸ್ (JDS) ಶಾಸಕರನ್ನು ಸೆಳೆಯಲು ಕಾಂಗ್ರೆಸ್ (Congress) ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರದಿಂದ ಆಪರೇಷನ್ ಹಸ್ತ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಅವರ ಆಪರೇಷನ್ ಹಸ್ತ ಯಾವುದೂ ವರ್ಕ್ ಆಗಲ್ಲ. ಜೆಡಿಎಸ್ ಮುಗಿಸಬೇಕು ಎಂದು ಹೇಳಿ 12 ಜನ ಕರೆದುಕೊಂಡು ಬನ್ನಿ, 13 ಜನ ಕರೆದುಕೊಂಡು ಬನ್ನಿ ಎಂದು ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದೆ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ – ಆರೋಪಿ ಬಂಧನ

ಕಾಂಗ್ರೆಸ್‌ನವರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ನಮ್ಮ ಎಲ್ಲಾ ಶಾಸಕರು ಏನೇನು ನಡೆಯುತ್ತಿದೆ ಎಂದು ನನ್ನ ಬಳಿ ಹೇಳಿದ್ದಾರೆ. ಜೆಡಿಎಸ್‌ಗೆ ಯಾವುದೇ ಶಾಕು, ವೀಕು ಮಾಡೋಕೆ ಆಗೊಲ್ಲ. ಕಾಂಗ್ರೆಸ್‌ನವರ ಪಾಪದ ಕೊಡ ತುಂಬಿದೆ. ದೇವರೇ ಕಾಂಗ್ರೆಸ್‌ನವರಿಗೆ ಶಿಕ್ಷೆ ಕೊಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:  ಈ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

Share This Article