ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ: ಪರಮೇಶ್ವರ್‌ ವಿಶ್ವಾಸ

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಅಂತ ಗೃಹ ಸಚಿವ ಪರಮೇಶ್ವರ್ (G Parameshwar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಹೋದ್ರೆ ಸಚಿವರಾಗಿ ಮುಂದುವದ ನೈತಿಕತೆ ಇಲ್ಲ ಎಂಬ ಸಚಿವ ರಾಜಣ್ಣ (KN Rajanna) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಹೆಚ್ಚು ಸ್ಥಾನ ಗೆಲ್ತೀವಿ ಅನ್ನೋ ವಿಶ್ವಾಸ ಇದೆ. 28ಕ್ಕೆ 28 ಗೆಲ್ಲೋಕೆ ಹೊರಟಿದ್ದೇವೆ. ಹಿಂದೆ 27 ಸ್ಥಾನ ಕಾಂಗ್ರೆಸ್ ಗೆದ್ದಿರೋದನ್ನ ನೆನಪು ಮಾಡಿಕೊಳ್ಳಬೇಕು ಎಂದರು‌.

ಸದ್ಯದ ವಾತಾವರಣ ಚೆನ್ನಾಗಿ ಇದೆ. ನಾವು ಗ್ಯಾರಂಟಿಗಳನ್ನ ಕೊಟ್ಟಿದ್ದೇವೆ. ಜನಪರ ಸರ್ಕಾರ ಇದೆ. ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ‌. ನಾವು ಹೆಚ್ಚು ಸ್ಥಾನ ಗೆಲ್ತೀವಿ‌ ಎಂದರು. ಇದನ್ನೂ ಓದಿ: ಜ.31ಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಅವಧಿ ಅಂತ್ಯ

ಇದೇ ವೇಳೆ ‌ನಿಗಮ-ಮಂಡಳಿ ಸ್ಥಾನದ ವಿಚಾರವಾಗಿ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಮತ್ತು ಅಧ್ಯಕ್ಷರು ಹೇಳಿದ ಮೇಲೆ ಅ ಸಬ್ಜೆಕ್ಟ್ ಮುಗೀತು. ನಾವು ಹೇಳೋದನ್ನ ಹೇಳಿದ್ದು ಆಯ್ತು. ಈಗ ಸಿಎಂ, ಅಧ್ಯಕ್ಷರು ಅದಕ್ಕೆ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ ಅಲ್ಲವಾ ಅಲ್ಲಿಗೆ ಮುಗೀತು ಎಂದರು.

Share This Article