ಉಪಚುನಾವಣೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ – ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ಉಪಚುನಾವಣೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆ (ByElection) ಪ್ರಚಾರ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನ.4 ರಿಂದ 11ರವರೆಗೆ 3 ಕ್ಷೇತ್ರಗಳಲ್ಲಿ ಚುನಾವಣೆ ‌ಪ್ರಚಾರ ಮಾಡುತ್ತೇನೆ. 3 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದು ತಿಳಿಸಿದರು.ಇದನ್ನೂ ಓದಿ: ಚುನಾವಣೆಗೋಸ್ಕರ ಬಿಜೆಪಿಯವರು ರಾಜಕೀಯ ಪ್ರತಿಭಟನೆ ಮಾಡ್ತಿದ್ದಾರೆ – ಸಿಎಂ

ಶಿಗ್ಗಾಂವಿಯಲ್ಲಿ ನಾಮಪತ್ರ ವಾಪಸ್ ಪಡೆಯುವಂತೆ ಅಜ್ಜಂಪೀರ್ ಖಾದ್ರಿಗೆ ನಾವೇ ಹೇಳಿದ್ದೇವು. ನೀನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ವಿರುದ್ಧ ನಿಂತುಕೊಳ್ಳಬೇಡ ಎಂದು ಹೇಳಿದ್ದೇವೆ. ಹೀಗಾಗಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಜಮೀರ್ ಕೂಡಾ ಮಾತಾಡಿ ವಾಪಸ್ ತೆಗೆಸಿದ್ದಾರೆ ಎಂದು ಹೇಳಿದರು.

ಇನ್ನೂ ಅಜ್ಜಂಪೀರ್ ಖಾದ್ರಿಯವರನ್ನು ಕಾಂಗ್ರೆಸ್ ಅವರು ಕಿಡ್ನಾಪ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ಬಿಟ್ಟು ಇನ್ನೇನು ಮಾಡುವುದಿಲ್ಲ. ಕುಮಾರಸ್ವಾಮಿ, ಬಿಜೆಪಿಯವರು ಬರೀ ಸುಳ್ಳನ್ನೇ ಹೇಳುತ್ತಾರೆ. ಯಾವತ್ತಾದರೂ ಯಾವುದಾದರೂ ವಿಷಯವನ್ನು ಬಿಜೆಪಿ ಅವರು, ಕುಮಾರಸ್ವಾಮಿ ಲಾಜಿಕಲ್ ಎಂಡ್ ತಗೊಂಡು ಹೋಗಿದ್ದಾರಾ? ಬರೀ ಸುಳ್ಳು ಆರೋಪ ಮಾಡುತ್ತಾರೆ ಅಷ್ಟೆ ಎಂದು ಕಿಡಿಕಾರಿದರು.ಇದನ್ನೂ ಓದಿ:ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ – ಸಿಎಂ ಸ್ಪಷ್ಟನೆ

Share This Article