ಯುಗಾದಿ ನಂತರ ಮೆಗಾ ಆಪರೇಷನ್‌ಗೆ `ಕೈ’ ಪಾಳಯ ಸಿದ್ಧತೆ?

Public TV
1 Min Read

ಬೆಂಗಳೂರು: ಯುಗಾದಿ ಹಬ್ಬದ (Ugadi Festival) ನಂತರ 20 ಪ್ರಮುಖ ಬಿಜೆಪಿ (BJP) ನಾಯಕರು ಹಾಗೂ ಶಾಸಕರ ಆಪರೇಷನ್‌ಗೆ ಕಾಂಗ್ರೆಸ್ (Congress) ಪಾಳಯದಲ್ಲಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ವಲಸಿಗ ಸಚಿವರೂ ಸೇರಿದಂತೆ ಹಾಲಿ ಶಾಸಕರು ಹಾಗೂ ಆಯ್ದ ಪ್ರಮುಖ ನಾಯಕರನ್ನ ಕರೆತರುವ ಕಸರತ್ತು ಜೋರಾಗಿ ನಡೆದಿದೆ. ತೆರಮರೆಯಲ್ಲಿ ನಡೆದ ಮಾತುಕತೆಗೆ ತೆರೆ ಎಳೆಯಲು ಕಾಂಗ್ರೆಸ್ ಯುಗಾದಿ ಹಬ್ಬಕ್ಕೆ ಡೆಡ್ ಲೈನ್ ಹಾಕಿಕೊಂಡಿದೆ. ಇದನ್ನೂ ಓದಿ: ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ: ಅಕ್ರಮ ವಲಸಿಗರ ನಿಯಂತ್ರಣಕ್ಕೆ ಮುಂದಾದ ಬ್ರಿಟನ್

ಈ ಬಾರಿ ಕೈ ನಾಯಕರು ದೊಡ್ಡ ಮಟ್ಟದ ವಲಸೆ ನಿರೀಕ್ಷೆ ಮಾಡುತ್ತಿದ್ದಾರೆ. ಸಂಖ್ಯಾಬಲ ಹೆಚ್ಚಿಸಿಕೊಂಡು 2023 ರಲ್ಲಿ ಅಧಿಕಾರ ಹಿಡಿಯೋದಕ್ಕೆ ಪಕ್ಕಾ ಲೆಕ್ಕಾಚಾರ ಮಾಡಿದೆ. ಅದಕ್ಕಾಗಿ ಬಿಜೆಪಿ (BJP), ಜೆಡಿಎಸ್‌ನ (JDS) ಪ್ರಮುಖ ನಾಯಕರು ಬರಲು ಮನಸ್ಸು ಮಾಡಿದ್ರೆ, ಅವರನ್ನ ಕರೆತರಲು ಕೈ ಪಾಳಯ ಲೆಕ್ಕಾಚಾರ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ – ಅತ್ತೆ ಮನೆಯಲ್ಲಿ ಹೋಳಿ ಆಚರಿಸೋಕೆ 10 ದಿನ ರಜೆ ಕೇಳಿದ ಇನ್ಸ್‌ಪೆಕ್ಟರ್‌

ಸಾಧ್ಯವಾದಷ್ಟು ಮಟ್ಟಿಗೆ ಯುಗಾದಿ ಹಬ್ಬದ ಆಸುಪಾಸಿನಲ್ಲೇ ಪಕ್ಷ ಸೇರ್ಪಡೆ ಮಾಡಿಕೊಳ್ಳುವುದು ಕೈ ಪಾಳಯದ ಲೆಕ್ಕಾಚಾರ. ಆದ್ದರಿಂದ ಪಕ್ಷ ಸೇರ್ಪಡೆ ಬಗ್ಗೆ ಒಲವು ತೋರಿದವರು, ಕಾಂಗ್ರೆಸ್ ನಾಯಕರೇ ಆಹ್ವಾನ ಕೊಟ್ಟವರು ಎಲ್ಲರಿಗೂ ಯುಗಾದಿಯ ಡೆಡ್ ಲೈನ್ ನೀಡಲಾಗಿದೆ. ಯುಗಾದಿ ಮುಗಿಯುತ್ತಿದ್ದಂತೆ ಅಧಿಕೃತವಾಗಿ ಪಕ್ಷ ಸೇರ್ಪಡೆಗೆ ಆಸಕ್ತಿ ತೋರಿದರೆ ಬನ್ನಿ, ತಡವಾದರೆ ನಮಗೂ ಕಷ್ಟವಾಗಲಿದೆ ಎಂಬ ಸಂದೇಶ ರವಾನಿಸಲಾಗಿದೆ. ಮಾತುಕತೆ ನಡೆಸಿದವರು `ಕೈ’ ಪಾಳಯ ಸೇರ್ಪಡೆಗೆ ಒಪ್ಪಿದರೆ ಯುಗಾದಿಗೆ ಕಾಂಗ್ರೆಸ್‌ನಿಂದ ಮೆಗಾ ಆಪರೇಷನ್ ಫಿಕ್ಸ್ ಎಂದು ಆಪ್ತ ವಲಯದಲ್ಲಿ ಸದ್ದು ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *