ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ ಬಿಡ್ತಾರೆ: ಮೋದಿ

Public TV
1 Min Read

ಲಕ್ನೋ: ‘ಇಂಡಿಯಾ’ ಮೈತ್ರಿಕೂಟ (INDIA Alliance) ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು (Ram Mandir) ಕಾಂಗ್ರೆಸ್‌ ಬುಲ್ಡೋಜರ್‌ನಿಂದ ಬೀಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದ್ದಾರೆ.

ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದ ನಂತರ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಲು ಯೋಜಿಸುತ್ತಿದೆ. ಅಂತಿಮವಾಗಿ ದೇವಾಲಯವನ್ನು ಕೆಡವಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ, ಅವರ ಸಚಿವರು ವಿಮಾನಗಳಲ್ಲಿ ಫ್ರೀಯಾಗಿ ಓಡಾಡ್ತಾರೆ.. ಮಹಿಳೆ ಯಾಕೆ ಫ್ರೀ ಬಸ್‌ ಪ್ರಯಾಣ ಮಾಡಬಾರದು: ಕೇಜ್ರಿವಾಲ್‌ ಪ್ರಶ್ನೆ

ಸಮಾಜವಾದಿ ಪಕ್ಷ-ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ರಾಮಲಲ್ಲಾನನ್ನು (ಬಾಲಕ ರಾಮ) ಟೆಂಟ್‌ಗೆ ಕಳುಹಿಸುತ್ತೇವೆ. ದೇವಸ್ಥಾನದ ಮೇಲೆ ಬುಲ್ಡೋಜರ್ ಬಿಡುತ್ತೇವೆ ಎಂದು ಹೇಳಿದ್ದರು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶವನ್ನು ವಿಭಜಿಸುವ ಮಾತುಗಳು ಬಂದಾಗ, ಪ್ರತಿಯೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದರು. ದೇಶ ವಿಭಜನೆಯಾಗಬಹುದೇ? ಅದು ಸಂಭವಿಸಿದೆಯೋ ಇಲ್ಲವೋ? ಅವರು ಮಾಡಿದ್ದಾರೋ ಅಥವಾ ಇಲ್ಲವೋ? ವಿಭಜನೆಯಲ್ಲಿ ಯಾವ ಹಂತಕ್ಕೆ ಹೋಗಬಹುದು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಾಕ್ ಬಳಿ ಅಣುಬಾಂಬ್ ಇದೆ ಆದ್ರೆ ಅದನ್ನು ನಿರ್ವಹಿಸಲು ಹಣವಿಲ್ಲ: ಪ್ರಧಾನಿ ಮೋದಿ

ಅವರಿಗೆ ದೇಶ ಮುಖ್ಯವಲ್ಲ, ಅವರಿಗೆ ಕುಟುಂಬ ಮತ್ತು ಅಧಿಕಾರ ಮುಖ್ಯ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

Share This Article