ರಾಹುಲ್‌ ಪತ್ರ – ಸರ್ಕಾರಿ ಪದವಿ ಕಾಲೇಜುಗಳಲ್ಲಿ 35 ವರ್ಷದ ಬಳಿಕ ವಿದ್ಯಾರ್ಥಿ ಚುನಾವಣೆಗೆ ಅನುಮತಿ?

Public TV
2 Min Read

– 1989 ರಲ್ಲಿ ಗಲಾಟೆಗಳು ನಡೆದ ಬಳಿಕ ಚುನಾವಣೆ ರದ್ದು

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 35 ವರ್ಷದ ಬಳಿಕ ವಿದ್ಯಾರ್ಥಿ ಚುನಾವಣೆ (Campus Elections) ನಡೆಯುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ (Rahul Gandhi) ಅವರು ಸಿಎಂ ಸಿದ್ದರಾಮಯ್ಯಗೆ (CM Siddaramaiah) ವಿದ್ಯಾರ್ಥಿ ಚುನಾವಣೆಗೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿ ಸೂಚನೆ ಮೇರೆಗೆ ಡಿಗ್ರಿ ಕಾಲೇಜುಗಳಲ್ಲಿ ಮತ್ತೆ ಎಲೆಕ್ಷನ್‌ಗೆ ಅನುಮತಿ ನೀಡುವ ಬಗ್ಗೆ ಉನ್ನತ ಶಿಕ್ಷಣ ‌ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಸರ್ಕಾರ ಏನಾದರೂ ಚುನಾವಣೆಗೆ ಅವಕಾಶ ನೀಡಿದರೆ ಮುಂದಿ‌ನ ವರ್ಷಗಳಿಂದಲೇ ಡಿಗ್ರಿ ಕಾಲೇಜಿನಲ್ಲಿ ಎಲೆಕ್ಷನ್ ಪಾಲಿಟಿಕ್ಸ್ ಎಂಟ್ರಿ ಆಗಲಿದೆ.

ಕಾಲೇಜುಗಳಲ್ಲಿ ಎಲೆಕ್ಷನ್ ಗೆ ಅನುಮತಿ ನೀಡುವ ಚರ್ಚೆ ಮಧ್ಯೆಯ ಸಿಎಂ ಸಿದ್ದರಾಮಯ್ಯನವರು ದೆಹಲಿಯಲ್ಲಿ ಪ್ರತಿಕ್ರಿಯಿಸಿ, ಕಾಲೇಜುಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಚಿಂತನೆ ಇದೆ. ರಾಹುಲ್ ಗಾಂಧಿ ಅವರಿಗೂ ಈ ಆಸಕ್ತಿ ಇದೆ ಎನ್ನುವ ಮೂಲಕ ಅನುಮತಿ ನೀಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: 2029ಕ್ಕೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರ್ತೀವಿ, ಬಿಜೆಪಿ ನಾಯಕರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

 

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಕರ್ನಾಟಕದಲ್ಲಿ ಈಗ ಬಲಶಾಲಿಯಾಗುತ್ತಿದೆ. ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟಕ್ಕೆ (NSUI) ಪ್ರೋತ್ಸಾಹ ನೀಡಿ ಯುವ ನಾಯಕರನ್ನು ಬೆಳೆಸಿದಾಗ ಮಾತ್ರ ಭವಿಷ್ಯದಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಗಟ್ಟಿಯಾಗುತ್ತದೆ. ಈ ಕಾರಣಕ್ಕೆ ಮತ್ತೆ ಪದವಿ ಕಾಲೇಜಿನಲ್ಲಿ ಚುನಾವಣೆ ಅನುಮತಿ ನೀಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ವಿದ್ಯಾರ್ಥಿ ಚುನಾವಣೆಗಳಲ್ಲಿ ಹಿಂಸಾಚಾರ, ಜಾತಿ ಆಧಾರಿತ ರಾಜಕೀಯ, ರೌಡಿ ಅಂಶಗಳು ಮತ್ತು ರಾಜಕಾರಣಿಗಳ ಹಸ್ತಕ್ಷೇಪದಿಂದ ಪ್ರಾಬಲ್ಯದಿಂದಾಗಿ ಎನ್‌ಎಸ್‌ಯುಐ ಪ್ರಭಾವ ಕರ್ನಾಟಕದಲ್ಲಿ ಕಡಿಮೆಯಾಗಿದೆ.

ಚುನಾವಣೆ ನಿಷೇಧಿಸಿದ್ದು ಯಾಕೆ?
1989 ರಲ್ಲಿ ನಡೆದ ಚುನಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪದಿಂದ ಭಾರೀ ಅಹಿತಕರ ಘಟನೆಗಳು ನಡೆದಿದ್ದವು. ಚುನಾವಣೆ ಸಮಯದಲ್ಲಿ ವಿದ್ಯಾರ್ಥಿಗಳ ಮಧ್ಯೆಯೇ ಗಲಾಟೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿ ಚುನಾವಣೆಯನ್ನು ರದ್ದು ಮಾಡಲಾಗಿತ್ತು.  ಇದನ್ನೂ ಓದಿ: ಡಿಕೆಶಿ ಪರ ಕೆಲ ಶಾಸಕರ ಬೆಂಬಲ ಮಾತ್ರ ಇದೆ, 5 ವರ್ಷವೂ ನಾನೇ ಸಿಎಂ ಡೆಲ್ಲಿಯಲ್ಲಿ ಸಿಎಂ ಗೂಗ್ಲಿ

Share This Article