ಕಾಂಗ್ರೆಸ್ಸಿಗೆ ಇಟಲಿಯ ಮಹಿಳೆಯ ಆಸಕ್ತಿ ಬಗ್ಗೆ ಮಾತ್ರ ಚಿಂತೆ, ಮುಸ್ಲಿಮ್ ಮಹಿಳೆಯರ ಬಗ್ಗೆ ಇಲ್ಲ – ಸ್ವಾಮಿ

Public TV
1 Min Read

ನವದೆಹಲಿ: ಕಾಂಗ್ರೆಸ್ ಯಾವಾಗಲೂ ಇಟಲಿ ಮೂಲದ ಮಹಿಳೆಯ ಆಸಕ್ತಿಯ ಕುರಿತು ಚಿಂತಿಸುತ್ತದೆ ಹೊರತು ಭಾರತೀಯ ಮುಸ್ಲಿಮ್ ಮಹಿಳೆಯರ ಕಷ್ಟಗಳ ಬಗ್ಗೆ ಚಿಂತಿಸುವುದಿಲ್ಲ ಎಂದು ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ತ್ರಿವಳಿ ತಲಾಖ್ ನಿಷೇಧ ತಿದ್ದುಪಡಿ ಮಸೂದೆಯ ಬಗ್ಗೆ ರಾಜ್ಯಸಭೆಯಲ್ಲಿ ಸಭೆಯಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಈಗಾಗಲೇ ತ್ರಿವಳಿ ತಲಾಕ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕಾಯ್ದೆ ರೂಪುಗೊಳ್ಳದೇ ದಿನದೂಡುವಂತೆ ಮಾಡಲು ಈಗ ಜಂಟಿ ಸಂಸದೀಯ ಸಮಿತಿಯ ಆಯ್ಕೆ ಪರಿಶೀಲನೆಗೆ ಒಪ್ಪಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ನಿಜಕ್ಕೂ ಇದು ನಾಚಿಕೆಗೇಡಿನ ವಿಚಾರ ಎಂದು ಹೇಳಿದರು.

ಮಂಗಳವಾರವೂ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯ ಬಗ್ಗೆ ಚರ್ಚೆಯ ವೇಳೆ ವಿಪಕ್ಷಗಳು ಜಂಟಿ ಸಂಸದೀಯ ಸಮಿತಿಗೆ ಆಯ್ಕೆ ಪರಿಶೀಲನೆಗೆ ಒಪ್ಪಿಸುವಂತೆ ಪಟ್ಟು ಹಿಡಿದವು. ಎಐಡಿಎಂಕೆ ಸದಸ್ಯರ ಜೊತೆ ವಿಪಕ್ಷಗಳು ಅಡ್ಡಿ ಪಡಿಸಿದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಡಿಸೆಂಬರ್ 28 ರಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಪಾಸ್ ಆಗಿತ್ತು. ಮಸೂದೆಯ ಪರ 245 ಮತ ಬಿದ್ದರೆ ವಿರುದ್ಧವಾಗಿ 11 ಮತಗಳು ಬಿದ್ದಿತ್ತು. ಮತಕ್ಕೆ ಹಾಕುವ ಮೊದಲೇ ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ ಮತ್ತು ಎಐಎಡಿಎಂಕೆ ಸಭಾತ್ಯಾಗ ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv  

Share This Article
Leave a Comment

Leave a Reply

Your email address will not be published. Required fields are marked *