ಮುನಿರತ್ನ‌ ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ ದ್ವೇಷದ ರಾಜಕಾರಣ ಮಾಡ್ತಿದೆ: ಸಿ.ಟಿ.ರವಿ

Public TV
1 Min Read

ಬೆಂಗಳೂರು: ಮುನಿರತ್ನ (Munirathna) ವಿರುದ್ಧ ಸರ್ಕಾರ ಪೂರ್ವಾಗ್ರಹಪೀಡಿತ, ದ್ವೇಷದ ರಾಜಕಾರಣ ಮಾಡ್ತಿದೆ. ಅವರನ್ನು ರಾಜಕಾರಣದಿಂದಲೇ ಬದಿಗೆ ಸರಿಸಬೇಕೆಂದು ಸಂಚು ನಡೆಸಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ (C.T Ravi) ಆರೋಪಿಸಿದ್ದಾರೆ.

ಬಿಜೆಪಿ (BJP) ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಸರ್ವಾಧಿಕಾರಿ, ದ್ವೇಷಪೂರಿತವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಬಗ್ಗೆಯೂ ಕೋರ್ ಕಮಿಟಿ ಗಂಭೀರವಾಗಿ ಚರ್ಚೆ ನಡೆಸಿದೆ. ಸರ್ಕಾರ ಮುನಿರತ್ನ ವಿರುದ್ಧ ತನಿಖೆಗೆ ಮೇಲೆ ಎಸ್ಐಟಿ ರಚನೆ ಮಾಡಿದೆ. ಕಾಂಗ್ರೆಸ್ ನಾಯಕರ ಮೇಲೂ ಈ ರೀತಿ ಆರೋಪಗಳು ಕೇಳಿಬಂದಾಗ ಏನು ಕ್ರಮ ಕೈಗೊಂಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮೈದಾನದ ಗೇಟ್ ಬಿದ್ದು ಮಗು ಸಾವು – ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್‌ಗೆ ಗುಂಡೂರಾವ್ ಸೂಚನೆ

ಕೋರ್ ಕಮಿಟಿಯಲ್ಲಿ ಮೂರು ವಿಧಾನಸಭೆ ಉಪಚುನಾವಣೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದ್ದೇವೆ. ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ಜೆಡಿಎಸ್ ಜೊತೆ ಚರ್ಚಿಸಿ ನಿರ್ಣಯ ಮಾಡಲು ಕೋರ್ ಕಮಿಟಿ ತೀರ್ಮಾನಿಸಿದೆ. ಅಲ್ಲದೇ ದಕ್ಷಿಣ ಕನ್ನಡ-ಉಡುಪಿ ಪರಿಷತ್ ಉಪಚುನಾವಣೆಗೆ ಸಂಬಂಧಪಟ್ಟಂತೆ ಅಭ್ಯರ್ಥಿ ಆಯ್ಕೆ ಚರ್ಚೆ ಆಗಿದೆ. ಹೆಸರು ಶಿಫಾರಸ್ಸು ಮಾಡಲು ರಾಜ್ಯಾಧ್ಯಕ್ಷರಿಗೆ ಅಧಿಕಾರ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಗಣೇಶ ಮೆರವಣಿಗೆ ವೇಳೆ ಆಗುತ್ತಿರುವ ಗಲಾಟೆಗಳು, ಸರ್ಕಾರದ ಹಿಂದೂ ವಿರೋಧಿ ನೀತಿ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ವಿಪಕ್ಷಗಳ ಮೇಲೆ ಸರ್ಕಾರ ಸರ್ವಾಧಿಕಾರಿ ಹಾಗೂ ದ್ವೇಷದ ರಾಜಕೀಯದಿಂದ ನಡೆದುಕೊಳ್ಳುತ್ತಿದೆ. ಇದರ ವಿರುದ್ಧ ಜನಾಂದೋಲನ ರೂಪಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: MUDA Scam | ಸಿಎಂಗೆ ಬಿಗ್‌ ಡೇ – ಪ್ರಾಸಿಕ್ಯೂಷನ್‌ ಭವಿಷ್ಯ ನಾಳೆ ನಿರ್ಧಾರ

Share This Article