Maharashtra Polls | 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್‌

By
1 Min Read

ಮುಂಬೈ: ವಿಧಾನಸಭಾ ಚುನಾವಣೆ (Maharashtra Polls) ಹೊಸ್ತಿಲಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 7 ಬಂಡಾಯ ಅಭ್ಯರ್ಥಿಗಳನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ (Congress) ಸಮಿತಿ (ಎಂಪಿಸಿಸಿ) ಭಾನುವಾರ ರಾತ್ರಿ ಅಮಾನತುಗೊಳಿಸಿದೆ.

ಅಮಾನತುಗೊಂಡಿರುವ ನಾಯಕರಲ್ಲಿ ಶಾಮಕಾಂತ್ ಸನೇರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಕಲ್ಯಾಣ್ ಬೋರಾಡೆ ಮತ್ತು ಚಂದ್ರಪಾಲ್ ಚೌಕ್ಸೆ ಸೇರಿದ್ದಾರೆ. ಶನಿವಾರ ಎಂಪಿಸಿಸಿ ಇತರ 21 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿತ್ತು. ಈ ಮೂಲಕ 22 ಕ್ಷೇತ್ರಗಳಲ್ಲಿ ಒಟ್ಟು ಅಮಾನತುಗೊಂಡವರ ಸಂಖ್ಯೆ 28 ಕ್ಕೆ ಏರಿದೆ.

ಈ ಹಿಂದೆ ಅಮಾನತುಗೊಂಡಿರುವ ನಾಯಕರ ಪಟ್ಟಿಯಲ್ಲಿ ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವೆ, ಭರತ್ ಯೆರೆಮೆ, ಅಭಿಲಾಶಾ ಗವಟೂರೆ, ಪ್ರೇಮಸಾಗರ್ ಗನ್ವೀರ್, ಅಜಯ್ ಲಾಂಜೇವರ್, ವಿಲಾಸ್ ಪಾಟೀಲ್, ಆಸ್ಮಾ ಜಾವದ್ ಚಿಖ್ಲೇಕರ್, ಹಂಸಕುಮಾರ್ ಪಾಂಡೆ, ಕಮಲ್ ವ್ಯಾವಹರೆ, ಮೋಹನ್ರಾವ್ ದಾಂಡೇಕರ್, ಮಂಗಲ್ ವಿಲಾಸ್, ಮಂಗಲ್ ವಿಲಾಸ್ ಮನೋಜ ಶಿಂಧೆ, ಸುರೇಶ ಪಾಟೀಲಖೇಡೆ, ವಿಜಯ ಖಡ್ಸೆ, ಶಬೀರ್ ಖಾನ್, ಅವಿನಾಶ್ ಲಾಡ್, ಯಗ್ವಾಲ್ಯ ಜಿಚ್ಕರ್, ರಾಜು ಜೋಡೆ ಮತ್ತು ರಾಜೇಂದ್ರ ಮುಕಾಹ್ ಸೇರಿದ್ದಾರೆ.

ಅಮಾನತುಗೊಂಡ ಅಭ್ಯರ್ಥಿಗಳು ಮಹಾ ವಿಕಾಸ್ ಅಘಾಡಿ (MVA) ಅಧಿಕೃತ ನಾಮನಿರ್ದೇಶಿತರ ವಿರುದ್ಧ ಸ್ಪರ್ಧಿಸಲಿದ್ದಾರೆ. ಇದಕ್ಕೂ ಮೊದಲು, ಎಂವಿಎ (Maha Vikas Aghadi) ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಪಕ್ಷದ ಬಂಡಾಯ ಅಭ್ಯರ್ಥಿಗಳು ಆರು ವರ್ಷಗಳ ಅಮಾನತು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಎಚ್ಚರಿಸಿದ್ದರು.

ನ.20 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ನ.23 ರಂದು ಮತ ಎಣಿಕೆ ನಡೆಯಲಿದೆ.

Share This Article