ಭಾರತೀಯ ಸೇನೆಯನ್ನ ಕಾಂಗ್ರೆಸ್ ನಂಬಬೇಕು – ಪ್ರಹ್ಲಾದ್‌ ಜೋಶಿ

Public TV
2 Min Read

ನವದೆಹಲಿ: ಚೀನಾ-ಭಾರತ ಗಡಿ (India-China Clash) ವಿಚಾರವಾಗಿ ರಾಜ್ಯಸಭೆಯಲ್ಲಿ ಇಂದು ಕಾಂಗ್ರೆಸ್ (Congress) ನಡೆಸಿದ ಧರಣಿಯನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷ ಕಾಂಗ್ರೆಸ್ ಸದನ ಪೀಠಕ್ಕೆ ಅಗೌರವ ತೋರುವ ರೀತಿ ನಡೆದುಕೊಳ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸತ್ತಿನಲ್ಲಿ ಸೂಕ್ಷ್ಮ ವಿಷಯಗಳ ಚರ್ಚೆ ನಡೆಯದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಪ್ರತಿಪಕ್ಷದ ಸರ್ಕಾರದ ಅವಧಿಯಲ್ಲೂ ಇಂತಹ ಆಚರಣೆಯನ್ನು ಕಂಡಿದ್ದೇವೆ. ಸ್ವತಃ ರಾಜ್ಯಸಭೆ ಸಭಾಪತಿಯವರು ಸಂಧಾನಕ್ಕೆ ಕರೆದರೂ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬರಲು ಒಪ್ಪಲಿಲ್ಲ. ರಾಜ್ಯಸಭೆ ಪೀಠದಿಂದ ಏನೇ ನಿರ್ದೇಶನಗಳು ಬಂದರೂ ಅದನ್ನ ಉಲ್ಲಂಘಿಸಬೇಕು ಎಂಬ ನಿರ್ಧಾರ ಪ್ರತಿಪಕ್ಷಗಳು ಮಾಡಿದಂತಿದೆ. ಈ ರೀತಿಯ ನಡವಳಿಕೆ ಸದನದಲ್ಲಿ ತೋರುವುದು ಖರ್ಗೆಯವರಿಗೆ ಸರಿಯಾದುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಚೀನಾ ಗಡಿ ಸಂಘರ್ಷ – ಮೊಬೈಲ್ ಸಂಪರ್ಕ ಸುಧಾರಣೆಗೆ ತವಾಂಗ್‌ನಲ್ಲಿ 22 ಟವರ್

ರಾಜ್ಯಸಭೆ ಸಭಾಪತಿ ಅವರು ಪ್ರತಿಪಕ್ಷಗಳಲ್ಲಿ ಕೈ ಮುಗಿದು ಮನವಿ ಮಾಡಿದರು. ಸದನದಲ್ಲಿ ಪೀಠಾಧ್ಯಕ್ಷರು ಎದ್ದು ನಿಂತು ಕೈ ಮುಗಿದು ರಿಕ್ವೆಸ್ಟ್ ಮಾಡುತ್ತಾರೆ ಎಂದರೆ, ಪ್ರತಿಪಕ್ಷ ನಾಯಕ ಹಾಗೂ ಸಭಾ ನಾಯಕರು ಅದನ್ನ ಗೌರವಿಸಬೇಕು. ಆ ಮನವಿಯನ್ನ ಸಾರಾಸಗಟಾಗಿ ಮಲ್ಲಿಕಾರ್ಜುನ ಖರ್ಗೆ ತಳ್ಳಿ ಹಾಕುತ್ತಾರೆ ಎಂದರೆ ಏನರ್ಥ? ಸಂಧಾನದ ಮಾತುಕತೆಗೆ ನಾನು ಬರಲ್ಲ ಅಂತಾ ಖರ್ಗೆ ನೇರವಾಗಿ ಹೇಳಿದರು. ಒಂದು ಸೌಜನ್ಯವನ್ನ ತೋರಿಸಲಿಲ್ಲ. ಈ ನಡವಳಿಕೆ ಖಂಡನೀಯ ಎಂದರು.

ಕೊನೆಪಕ್ಷ ಪ್ರತಿಪಕ್ಷಗಳು ಚೀನಾ ವಿಚಾರದಲ್ಲಿ ನಮ್ಮ ಸೇನೆಯ ಹೇಳಿಕೆಯನ್ನಾದರೂ ನಂಬಬೇಕು. ಭಾರತೀಯ ಸೇನೆಯ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲವೇ? ಚೀನಾ-ಭಾರತ ಗಡಿ ವಿಚಾರ ಸೂಕ್ಷ್ಮ ವಿಚಾರವಾಗಿದ್ದು, ಸಾರ್ವಜನಿಕವಾಗಿ ಚರ್ಚೆ ನಡೆಸುವುದು ಎಷ್ಟು ಸೂಕ್ತ? ಕೆಲವು ಸೂಕ್ಷ್ಮ ವಿಚಾರಗಳನ್ನ ಸದನದಲ್ಲಿ ಚರ್ಚಿಸುವುದಕ್ಕಿದ್ದ ಸಭಾ ನಾಯಕರು, ಪ್ರತಿಪಕ್ಷ ನಾಯಕರು ಒಟ್ಟಾಗಿ ಸೇರಿ ಚರ್ಚಿಸುವ ಅಗತ್ಯತೆ ಇರುತ್ತದೆ. ಕಾಂಗ್ರೆಸ್ ಆಡಳಿತ ನಡೆಸುವಾಗಲು ಇಂಥಹ ಹಲವು ನಿದರ್ಶನಗಳಿವೆ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

ಕಾಂಗ್ರೆಸ್ ಆಡಳಿತ ನಡೆಸುವಾಗ ಇಂಥಹ ಸಂದರ್ಭಗಳಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ರಾಷ್ಟ್ರದ ಹಿತ ಗಮನಿಸಿ ಸರ್ಕಾರಕ್ಕೆ ಸಹಕಾರ ನೀಡಿದೆ. ಸದನದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಅಲ್ಲದೇ ಭಾರತೀಯ ಸೇನೆ ಕೂಡ ಹೇಳಿಕೆ ನೀಡಿದೆ. ಸೇನೆಯ ಹೇಳಿಕೆಯನ್ನಾದ್ರೂ ನಂಬಿ ಕಾಂಗ್ರೆಸ್ ಸುಗಮವಾಗಿ ಸದನ ನಡೆಯಲು ಅವಕಾಶ ಮಾಡಿಕೊಡಬಹುದಿತ್ತು. ಆದರೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಮೇಲಿನವರನ್ನ ಮೆಚ್ಚಿಸಬೇಕಿದೆ. ಯಾರನ್ನೋ ಮೆಚ್ಚಿಸಲು ಸಂವಿಧಾನಾತ್ಮಕವಾಗಿ ನಡೆಯುವ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಧರಣಿಗೆ ಜೋಶಿ ತಿರುಗೇಟು ನೀಡಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *