ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

Public TV
1 Min Read

ಬೆಂಗಳೂರು: ಕಾಂಗ್ರೆಸ್‌ನವರು (Congress) ಯೋಗೇಶ್ವರ್ (CP Yogeshwar) ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಪಕ್ಷದಲ್ಲೇ ಒಡಕು ತರುತ್ತಾರೆ ಹುಷಾರ್ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ಸಲಹೆ ನೀಡಿದ್ದಾರೆ.

ನನಗೆ ಟಾಸ್ಕ್ ಕೊಟ್ಟರೆ ಜೆಡಿಎಸ್ (JDS) ಪಕ್ಷವನ್ನ ಖಾಲಿ ಮಾಡ್ತೀನಿ ಎಂಬ ಯೋಗೇಶ್ವರ್ ಮಾತಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ಯಾರು ಮಾರಾಟ ಆಗಲ್ಲ. ಹಿಂದೆ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಮಾಡುತ್ತೇನೆ ಎಂದು ಹೇಳಿದ್ದು ಯಾರು? 30 ಜನರನ್ನು ಆಪರೇಷನ್ ಮಾಡುತ್ತೇನೆ ಎಂದು ಇದೇ ಯೋಗೇಶ್ವರ್ ಹೇಳಿದ್ದರು. ಕಾಂಗ್ರೆಸ್ ಅಧ್ಯಕ್ಷರಿಗೆ ಯೋಗೇಶ್ವರ್ ಬಗ್ಗೆ ಎಚ್ಚರಿಕೆ ಇರಲಿ. ನಮ್ಮ ಶಾಸಕರು ಯಾರು ಮಾರಾಟಕ್ಕೆ ಇಲ್ಲ. ನಮ್ಮ ಶಾಸಕರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಅಲ್ಲ. ನಮ್ಮ ಶಾಸಕರು ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಯಾರು ಪಕ್ಷ ಬಿಟ್ಟು ಹೋಗಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಿ.ಟಿ.ದೇವೇಗೌಡರಿಗೆ ಪಕ್ಷದ ಮೇಲೆ ಅಸಮಾಧಾನ ಇರೋದು ಸತ್ಯ: ಸುರೇಶ್ ಬಾಬು

ಅನೇಕರು ಜೆಡಿಎಸ್ ಮುಗಿದೇ ಹೋಯಿತು ಎಂದು ಹೇಳಿದರು. ಮತ್ತೆ ಫಿನಿಕ್ಸ್ನಂತೆ ಎದ್ದು ಬಂತು. ರಾಜ್ಯದಲ್ಲಿ ಜೆಡಿಎಸ್ ಮುಗಿಸೋಕೆ ಎಂದು ಯೋಗೇಶ್ವರ್ ಹೀಗೆ ಹೇಳುತ್ತಿದ್ದಾರೆ. ಜೆಡಿಎಸ್ ಅನ್ನು ತೆಗೆಯೋಕೆ ಯಾರಿಂದಲೂ ಸಾಧ್ಯವಿಲ್ಲ.ಬೊಮ್ಮಾಯಿ, ದೇವೇಗೌಡರು, ಪಟೇಲ್‌ರು ಕಟ್ಟಿದ ಪಕ್ಷ ಇದು. ಇದು ಕಾರ್ಯಕರ್ತರ ಪಕ್ಷ. ಜೆಡಿಎಸ್ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಳೆ ಮಹಾರಾಷ್ಟ್ರ ಬಿಜೆಪಿ, ಶಿವಸೇನೆ, ಎನ್‌ಸಿಪಿ ಮುಖಂಡರಿಂದ ದೆಹಲಿಯಲ್ಲಿ ಅಮಿತ್ ಶಾ ಭೇಟಿ

Share This Article