`ಕೈ’ಗೆ ಶಾಕ್‌ ಮೇಲೆ ಶಾಕ್‌; 1,800 ಕೋಟಿ ರೂ. ಡಿಮ್ಯಾಂಡ್‌ ನೋಟಿಸ್‌ ಬೆನ್ನಲ್ಲೇ ಐಟಿಯಿಂದ ಮತ್ತೆರಡು ನೋಟಿಸ್!

Public TV
1 Min Read

ನವದೆಹಲಿ: 1,800 ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ನೋಟಿಸ್ ಸ್ವೀಕರಿಸಿದ ಒಂದು ದಿನದ ನಂತರ ಶುಕ್ರವಾರ ರಾತ್ರಿ ಆದಾಯ ತೆರಿಗೆ ಇಲಾಖೆಯಿಂದ (Income Tax Department) ಮತ್ತೆ ಎರಡು ನೋಟಿಸ್‌ಗಳು ಬಂದಿವೆ ಎಂದು ರಾಷ್ಟ್ರೀಯ ಕಾಂಗ್ರೆಸ್ (AICC) ಶನಿವಾರ ಹೇಳಿದೆ.

ಈ ಸಂಬಂಧ ಶನಿವಾರ (ಇಂದು) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Jairam Ramesh), ಶುಕ್ರವಾರ ರಾತ್ರಿ ನಮಗೆ ಮತ್ತೆರಡು ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಕುಟುಂಬ ಮೊಸಳೆ ಕಣ್ಣೀರು ಹಾಕಲ್ಲ: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಪಕ್ಷವು ʻತೆರಿಗೆ ಭಯೋತ್ಪಾದನೆʼಗೆ ಗುರಿಯಾಗಿದೆ ಎಂದು ರಮೇಶ್ ಪುನರುಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು. ಈ‌ ನಡುವೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆದಿದ್ದಾರೆ ಎಂದು ಹೇಳಿದರು.

ಆದಾಯ ತೆರಿಗೆ ಇಲಾಖೆಯಿಂದ ನಿನ್ನೆ (ಶುಕ್ರವಾರ) ರಾತ್ರಿ ನನಗೆ ನೋಟಿಸ್ ಬಂದಿದೆ. ನಾನು ಆಘಾತಕ್ಕೊಳಗಾಗಿದ್ದೇನೆ, ವಿಷಯ ಈಗಾಗಲೇ ಮುಚ್ಚಿಹೋಗಿದೆ. ಬಿಜೆಪಿ ಕಾಂಗ್ರೆಸ್ ಮತ್ತು I.N.D.I.A ಒಕ್ಕೂಟಕ್ಕೆ ಹೆದರುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌ – ‘ಕೈ’ ನಾಯಕನ ಸೊಸೆ ಬಿಜೆಪಿ ಸೇರ್ಪಡೆ

ಕಳೆದ ಗುರುವಾರ ದೆಹಲಿ ಹೈಕೋರ್ಟ್ ತನ್ನ ವಿರುದ್ಧ ತೆರಿಗೆ ಅಧಿಕಾರಿಗಳು 4 ವರ್ಷಗಳ ಅವಧಿಗೆ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿತ್ತು. ನ್ಯಾ. ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು ಮರುಮೌಲ್ಯಮಾಪನವನ್ನು ಇನ್ನೊಂದು ವರ್ಷದವರೆಗೆ ತೆರೆಯಲು ಮಧ್ಯಪ್ರವೇಶಿಸಲು ನಿರಾಕರಿಸಿತ್ತು.

Share This Article