ರಾಜ್ಯಸಭಾ ಚುನಾವಣೆಗೆ 6 ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾಂಗ್ರೆಸ್

2 Min Read

ನವದೆಹಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ (Rajya Sabha Elections) ವಿವಿಧ ರಾಜ್ಯಗಳಿಂದ ಸ್ಪರ್ಧಿಸಲಿರುವ ಆರು ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ (Congress) ಪ್ರಕಟಿಸಿದೆ.

ಘೋಷಣೆಯಾದ ಪಟ್ಟಿಯಲ್ಲಿ ತೆಲಂಗಾಣದಿಂದ (Telangana) ಇಬ್ಬರು, ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಿಂದ ತಲಾ ಒಬ್ಬರು ಅಭ್ಯರ್ಥಿಗಳು ಸೇರಿದ್ದಾರೆ. ಅಭ್ಯರ್ಥಿಗಳಲ್ಲಿ ತೆಲಂಗಾಣದಿಂದ ಅಭಿಷೇಕ್ ಮನು ಸಿಂಗ್ವಿ (Abhishek Manu Singhvi) ಮತ್ತು ವೆಮ್ ನರೇಂದರ್ ರೆಡ್ಡಿ, ಛತ್ತೀಸ್‌ಗಢದಿಂದ ಫುಲೋ ದೇವಿ ನೇತಮ್, ಹರಿಯಾಣದಿಂದ ಕರಮ್‌ವೀರ್ ಸಿಂಗ್ ಬೌಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ ಮತ್ತು ತಮಿಳುನಾಡಿನಿಂದ ಎಂ ಕ್ರಿಸ್ಟೋಫರ್ ತಿಲಕ್ ಸೇರಿದ್ದಾರೆ. ಇದನ್ನೂ ಓದಿ: ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಪರಮೇಶ್ವರ್

ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಔಪಚಾರಿಕವಾಗಿ ಘೋಷಣೆ ಮಾಡಿದ್ದಾರೆ.


ರಾಜ್ಯಸಭಾ ಚುನಾವಣೆ 2026
ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.

ಮಹಾರಾಷ್ಟ್ರದಲ್ಲಿ 7, ತಮಿಳುನಾಡಿನಲ್ಲಿ 6 ಸ್ಥಾನಗಳು ಮತ್ತು ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ತಲಾ ಆರು ಸ್ಥಾನಗಳು ಖಾಲಿ ಇವೆ. ಒಡಿಶಾದಲ್ಲಿ 4 ಸ್ಥಾನಗಳು ಖಾಲಿಯಾಗಲಿವೆ. ಅಸ್ಸಾಂನಲ್ಲಿ 3 ಸ್ಥಾನಗಳಿಗೆ, ತೆಲಂಗಾಣ, ಛತ್ತೀಸ್‌ಗಢ ಮತ್ತು ಹರಿಯಾಣದಲ್ಲಿ ತಲಾ 2 ಸ್ಥಾನಗಳಿಗೆ, ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ

Share This Article