ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ತನಿಖಾ ಸಂಸ್ಥೆ ದುರ್ಬಳಕೆ ಆರೋಪ; ಮೈಸೂರಲ್ಲಿ `ಕೈ’ ಕಾರ್ಯಕರ್ತರ ಪ್ರತಿಭಟನೆ

1 Min Read

– ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ

ಮೈಸೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ಕೇಂದ್ರ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ (Congress Protest) ನಡೆಸಿದ್ರು.

ನಗರದ ರಾಮಸ್ವಾಮಿ ವೃತ್ತದ ಬಳಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರ0, ಕೇಂದ್ರ ಸರ್ಕಾರ ವಿರೋಧಿಸುವ ಪೊಸ್ಟರ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.

ಈ ವೇಳೆ ಬ್ಯಾರಿಕೇಡ್ ತಳ್ಳಿ ಬಿಜೆಪಿ ಕಚೇರಿಗೆ ಮತ್ತಿಗೆ ಹಾಕಲು ಯತ್ನಿಸಲಾಯ್ತು. ತಕ್ಷಣಕ್ಕೆ ತಡೆಯೊಡ್ಡಿದ ಪೊಲೀಸರ ಜೊತೆ ವಾಗ್ವಾದಕ್ಕಿಳಿದ್ರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ಯಲಾಯ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿಕೆಶಿ ಮರುಪ್ರಶ್ನೆ

`ಅಕ್ಕಾ ಅಕ್ಕಾ ಎಲ್ಲಿದೆ ರೊಕ್ಕಾ?’
ಇತ್ತ ಬೆಳಗಾವಿಯಲ್ಲೂ ಗೃಹಲಕ್ಷ್ಮಿ ಹಣಕ್ಕೆ ಒತ್ತಾಯಿಸಿ ಬಿಜೆಪಿ ಮಹಿಳಾ ಘಟಕಾ ಪ್ರತಿಭಟನೆ ನಡೆಸಿತು. `ಅಕ್ಕಾ ಅಕ್ಕಾ ಎಲ್ಲಿದೆ ರೊಕ್ಕಾ’ ಎಂದು ಘೋಷಣೆ ಕೂಗುತ್ತಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜೀನಾಮೆಗೆ ಆಗ್ರಹಿಸಿದ್ರು. ಇದನ್ನೂ ಓದಿ:ಹುಣಸೆ, ಹಲಸು, ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್‌ಡಿಡಿ ಮನವಿ

Share This Article