ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಬಿಜೆಪಿ ಸರ್ಕಾರ ಇಲ್ಲದ ರಾಜ್ಯಕ್ಕೆ ಅನುದಾನ ಇಲ್ಲ: ಖರ್ಗೆಯಿಂದ ಕಪ್ಪು ಪತ್ರ ಬಿಡುಗಡೆ

Public TV
2 Min Read

ನವದೆಹಲಿ: ಎಲ್ಲಿ ಬಿಜೆಪಿ ಸರ್ಕಾರ (BJP Government) ಇಲ್ಲವೋ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ. ನೆಹರು ಕಾಲದಲ್ಲಿ ನಿರ್ಮಾಣವಾದ ಸಂಸ್ಥೆಯಿಂದ ಜನರಿಗೆ ಉದ್ಯೋಗ ಸಿಗುತ್ತಿದೆ. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ಅಥವಾ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಕೇಂದ್ರ ಸರ್ಕಾರ ಶ್ವೇತ ಪತ್ರ (White Paper) ಬಿಡುಗಡೆ ಮಾಡುವ ಮೊದಲೇ ತಮ್ಮ ನಿವಾಸದಲ್ಲಿ ಕಪ್ಪು ಪತ್ರದ (Black Paper) ಪೋಸ್ಟರ್‌ ರಿಲೀಸ್‌ ಮಾಡಿ ಮೋದಿ ಸರ್ಕಾರದ (Modi Government) ವಿರುದ್ಧ ಕಿಡಿಕಾರಿದರು.

ಖರ್ಗೆ ಹೇಳಿದ್ದೇನು?
ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎಂಬ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಸುತ್ತಿದ್ದಾರೆ.

ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದು ಹೇಳಿ ಕೃಷಿ ಕಾಯ್ದೆ ತಂದರು. ಒಂದು ವರ್ಷ ರೈತರ ಪ್ರತಿಭಟನೆಯ ನಂತರ ಮೂರು ಕಾನೂನು ವಾಪಸ್ ಪಡೆದರು. ಕೃಷಿ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಲಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಬೇಕಿತ್ತು ನೀಡಿಲ್ಲ. ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಹೇಳಬೇಕು. ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದೀರಿ.  ಇದನ್ನೂ ಓದಿ: 48 ವರ್ಷಗಳ ಬಳಿಕ ದಿಢೀರ್‌ ಕಾಂಗ್ರೆಸ್‌ ತೊರೆದ ಮಾಜಿ ಸಚಿವ ಬಾಬಾ ಸಿದ್ದಿಕ್

ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದು ಎಲ್ಲಾ ಸರ್ಕಾರದಲ್ಲೂ ಆಗುತ್ತದೆ.

ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣೆ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ, ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ. ಮೊದಲು ಯಾಕೆ ಇಷ್ಟು ಪ್ರಮಾಣದ ಹಣ ಬರುತ್ತಿರಲಿಲ್ಲ? ಈಗ ಯಾಕೆ ಹಣ ಹೆಚ್ಚು ಬಿಜೆಪಿಗೆ ಬರುತ್ತಿದೆ? ಕೋಟ್ಯಂತರ ರೂ. ಹಣ ನೀಡಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ನನ್ನ ವಿರುದ್ಧವೂ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ನನ್ನ ಅಪ್ಪ ಇಬ್ಬರೇ ಬದುಕಿದ್ದು, ಇಲ್ಲಿಯವರೆಗೂ ಬಂದಿದ್ದೇನೆ, ಏನೇ ಆದರೂ ಹೆದರುವುದಿಲ್ಲ. ದಲಿತನಾಗಿ ಇಲ್ಲಿಯವರೆಗೂ ಬಂದಿದ್ದೇನೆ, ನನ್ನ ಗೌರವದಿಂದ ಕಾಣುತ್ತಾರೆ.

ರಾಹುಲ್ ಗಾಂಧಿ, ಸೋನಿಯಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರನ್ನು ಅವಹೇಳನ ಮಾಡುತ್ತಾರೆ. ಪ್ರಧಾನಮಂತ್ರಿ ಹುದ್ದೆಗೆ ಒಂದು ಗೌರವವಿದೆ. ನಮ್ಮ ಸಾಧನೆಗಳನ್ನು ಹೇಳಬೇಕು, ವಿರೋಧ ಪಕ್ಷದ ನಾಯಕರನ್ನು ಅವಹೇಳನ ಮಾಡಬಾರದು.  ಇದನ್ನೂ ಓದಿ: ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ನಾರಾಯಣ ಗೌಡ ಕಾಂಗ್ರೆಸ್‌ ಸೇರ್ಪಡೆ?

ತೆರಿಗೆ ಅನ್ಯಾಯದ ಇವರದೇ ಪಕ್ಷದವರು ಮಾತನಾಡಿದರೆ ಅದು ದೇಶ ಒಡೆಯುವ ಮಾತಲ್ಲ. ಇದೇ ಮಾತು ಬೇರೆ ನಾಯಕರು ಹೇಳಿದರೆ ದೇಶ ಒಡೆಯುವ ಮಾತು. ಮುಖ್ಯಮಂತ್ರಿಯಾಗಿದ್ದಾಗ ದೇಶ ಒಡೆದವರು ಯಾರು? ದೇಶ ಒಡೆಯುವ ಭಾಷಣ ಮಾಡುವುದು ಯಾರು? ರಾಜ್ಯಪಾಲರನ್ನು ಸರ್ವಾಧಿಕಾರಿಯಂತೆ ವರ್ತಿಸಲು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಫೈಲ್‌ಗಳನ್ನು ಕ್ಲಿಯರ್ ಮಾಡದೇ ಕಿರುಕುಳ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಉಚಿತ ರೇಷನ್ ನೀಡುವುದಾಗಿ ಹೇಳುತ್ತಾರೆ. ಆದರೆ ಆ ಕಾನೂನು ಮಾಡಿದ್ದು ಕಾಂಗ್ರೆಸ್.

 

Share This Article