ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊಗಳಿದ ಮೋಹನ್ ಭಾಗವತ್

Public TV
2 Min Read

ನವದೆಹಲಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು ಮತ್ತು ಅದು ದೇಶಕ್ಕೆ ಮಹಾನ್ ನಾಯಕರನ್ನು ನೀಡಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನವದೆಹಲಿಯ ವಿಜ್ಞಾನಭವನದಲ್ಲಿ `ಭಾರತದ ಭವಿಷ್ಯ- ಆರ್‌ಎಸ್‌ಎಸ್ ದೃಷ್ಟಿಕೋನದಲ್ಲಿ’ ಎಂಬ ಮೂರು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಿಪಿಎಂ ಸಂಸ್ಥಾಪಕ ಎಂಎನ್ ರಾಯ್ ಬಗ್ಗೆಯೂ ಪ್ರಸ್ತಾಪಿಸಿದರು. ದೇಶದ ಹಿತಕ್ಕಾಗಿ ನಾಗ್ಪುರದಲ್ಲಿ ಕಮ್ಯುನಿಸ್ಟರ ಜೊತೆಗೆ ಹೆಗಡೆವರ್ ಕೆಲಸ ಮಾಡಲು ಮುಂದಾಗಿದ್ದರು. ಹೆಗಡೆವರ್ ಚಿಂತನೆಯನ್ನು ಅರ್ಥ ಮಾಡಿಕೊಳ್ಳದೇ ಆರ್‌ಎಸ್‌ಎಸ್ ಅನ್ನು ಇತರೆ ಸಂಘಟನೆಗಳೊಂದಿಗೆ ಹೋಲಿಸೋದು ಸರಿಯಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.

ತಮ್ಮ ಸಮಾವೇಶದ ಉದ್ದೇಶವನ್ನು ತಿಳಿಸಿದ ಮೋಹನ್ ಭಾಗವತ್, ದೇಶದ ಜನತೆಗೆ ಸಂಘಟನೆಯ ಉದ್ದೇಶದ ಕುರಿತು ಅರಿತುಕೊಳ್ಳಲು ಸಹಾಯಕವಾಗಲಿದೆ. ಆರ್‌ಎಸ್‌ಎಸ್ ಹಿಂದುತ್ವ ಸಿದ್ಧಾಂತ ಯಾರನ್ನು ವಿರೋಧಿಸುವುದಲ್ಲ. ಸಂಘ ದೇಶದಲ್ಲಿ ಒಂದು ಶಕ್ತಿಯಾಗಿ ಬೆಳೆದು ನಿಂತಿದ್ದು, ದೇಶದ ಬಹುದೊಡ್ಡ ಸಂಘಟನೆಯಾಗಿದೆ. ಎಲ್ಲ ಭಾಷೆಯ ಜನರು ಸಂಸ್ಥೆಯಲ್ಲಿದ್ದರೆ. ಆದರೆ ಸಂಘ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಹೆಗಡೆವರ್ ಅವರ ಬಗ್ಗೆ ತಿಳಿದುಕೊಳ್ಳದೆ ಸಂಘದ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಅವರು, ಹೆಗಡೆವರ್ ಸಣ್ಣ ಕುಟುಂಬದಿಂದ ಬಂದಿದ್ದವರು. ಅವರು ಬಾಲ್ಯದಿಂದಲೂ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತರಾಗಿದ್ದರು. ಅಲ್ಲದೇ ಹಲವು ಕಷ್ಟದ ಸಂದರ್ಭಗಳನ್ನು ತಿಳಿದಿದ್ದರು. ಒಂದೇ ದಿನ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡಿದ್ದರು ಎಂದು ಹೆಗಡೆವರ್ ಜೀವನದ ಕುರಿತು ವಿವರಿಸಿದರು.

ಕೆಲ ಸಂದರ್ಭದಲ್ಲಿ ಸಂಘ ವಿಶಿಷ್ಟತೆಯನು ತಪ್ಪಾಗಿ ಆಥೈಸಿಕೊಳ್ಳಲಾಗಿದೆ ಎಂದು ತಿಳಿಸಿದ ಭಾಗವತ್, ಕೆಲ ಮಂದಿ ಭಯದಿಂದ ಆರ್‌ಎಸ್‌ಎಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ. ಆದರೆ ಇಂದು ಪ್ರತಿದಿನದ ಜೀವನದಲ್ಲೂ ರಾಜಕೀಯ ಪ್ರವೇಶಿಸಿದೆ. ದೇಶದಲ್ಲಿ ವೈವಿಧ್ಯತೆ ಇದ್ದು, 33 ಸಾವಿರ ದೇವರು ಇದ್ದರೆ. ಅದರಂತೆ ನಾಸ್ತಿರಕು, ಅನೇಕ ಭಾಷೆ ಮಾತನಾಡುವ ಜನರು, ಹಲವು ಸಿದ್ಧಾಂತಗಳಿದ್ದರೂ ನಾವು ಒಟ್ಟಿಗೆ ಇದ್ದೇವೆ. ಇದಕ್ಕಾಗಿ ನಾವು ಕೆಲವು ತ್ಯಾಗಗಳನ್ನು ಮಾಡಬೇಕು. ದೇಶದ ವರ್ತಮಾನ, ಭವಿಷ್ಯ, ಇತಿಹಾಸ ಎಲ್ಲವೂ ಜನರ ಮೇಲೆಯೇ ಅವಲಂಬಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವಂತೆ ಆರ್‌ಎಸ್‌ಎಸ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಹಲವು ಮುಖಂಡರಿಗೂ ಆಹ್ವಾನ ನೀಡಿತ್ತು. ಆದರೆ ಯಾವುದೇ ನಾಯಕರು ಆರ್‌ಎಸ್‌ಎಸ್ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮದಕ್ಕೆ ಆಗಮಿಸಿರಲಿಲ್ಲ. ಉಳಿದಂತೆ ಬಾಲಿವುಡ್ ನಟರಾದ ನವಜುದ್ದೀನ್ ಸಿದ್ದಿಕಿ, ಅನು ಮಲಿಕ್, ಮನೀಷಾ ಕೊಯಿರಾಲಾ, ಅನೂ ಕಪೂರ್ ಸೇರಿದಂತೆ ಸಾಮಾಜದ ಗಣ್ಯವರ್ಗದಲ್ಲಿ ಗುರುತಿಸಿಕೊಂಡಿದ್ದ 600ಕ್ಕೂ ಹೆಚ್ಚು ಮಂದಿ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತ ಪ್ರಧಾನಿ ನರೇಂದ್ರ ಮೋದಿಗೆ 68ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಂಡರು. ಹುಟ್ಟುಹಬ್ಬದ ಪ್ರಯುಕ್ತ ವಾರಾಣಾಸಿಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಶುಭ ಹಾರೈಸಿದರು. ಉಳಿದಂತೆ ಕೈಲಾಸ ಮಾನಸ ಸರೋವರ ಯಾತ್ರೆ ಬಳಿಕ ಶಿವಭಕ್ತನ ಅವತಾರದಲ್ಲಿ ಕಾಣಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಧ್ಯಪ್ರದೇಶದಲ್ಲಿ ಚುನಾವಣಾ ರೋಡ್‍ಶೋ ಮೂಲಕ ಪ್ರಚಾರ ಆರಂಭಿಸಿದ್ದಾರೆ. 11 ಮಂದಿ ಅರ್ಚಕರ ಆಶೀರ್ವಾದ ಪಡೆದು 15 ಕಿಲೋ ಮೀಟರ್ ರೋಡ್‍ಶೋ ಕೈಗೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *