ಹಾಸನದ ಸಮಾವೇಶಕ್ಕೆ ಎಲ್ಲ ವರ್ಗದ ಜನರೂ ಬರಲಿ ಸಂತೋಷ: ಡಿಕೆಶಿ

Public TV
1 Min Read

ಬೆಂಗಳೂರು: ಹಾಸನದಲ್ಲಿ (Hassana) ನಡೆಯಲಿರುವ ಸಮಾವೇಶಕ್ಕೆ ಎಲ್ಲಾ ವರ್ಗದ ಜನರು ಬರಲಿ ಸಂತೋಷ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಳೆ ಬರುವುದು ಬೇಡ ಎಂದು ಹೇಳಲು ಆಗುವುದಿಲ್ಲ. ಮಳೆ ಬರಲಿ ಅದು ಪ್ರಕೃತಿ. ಎಲ್ಲಾ ಸಿದ್ದತೆಗಳನ್ನ ನಮ್ಮವರು ಮಾಡಿದ್ದಾರೆ ಬಹಳ ಚೆನ್ನಾಗಿ ಆಗುತ್ತೆ. ಬಿಜೆಪಿಯವರು ಇಲ್ಲದ ಸಲ್ಲದ ಆರೋಪಗಳನ್ನ ಮುಂಚಿತವಾಗಿಯೇ ಮಾಧ್ಯಮಕ್ಕೆ ಬಿಡುತ್ತಿದ್ದಾರೆ ಎಂದರು. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

 

ಜನ ಕಲ್ಯಾಣ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚು ಜನ ಬರುತ್ತಾರೆ ಎಂದು ಸಿಎಂ (CM Sidaramaiah) ಹೇಳಿದ್ದಾರೆ. ಬರಲಿ ಸಾಕಷ್ಟು ಜನ ನಾಳೆಯ ಸಮಾವೇಶಕ್ಕೆ ಬರುತ್ತಾರೆ. ಎಲ್ಲಾ ವರ್ಗದ ಜನರ ಬೆಂಬಲದಿಂದಲೇ ಸರ್ಕಾರ ಬಂದಿದೆ. ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷ ಮುಂದಾಳತ್ವ ವಹಿಸುತ್ತಿದೆ ಎಂದು ಹೇಳಿದರು.

 

Share This Article