ಭಾರತೀಯ ಸೇನೆ ಬೆಂಬಲಿಸಿ ರಾಷ್ಟ್ರವ್ಯಾಪಿ ‘ಜೈ ಹಿಂದ್‌ ಯಾತ್ರೆ’ಗೆ ಕರೆ

Public TV
1 Min Read

ನವದೆಹಲಿ: ಭಾರತೀಯ ಸೇನೆಗೆ ಬೆಂಬಲವನ್ನು ವ್ಯಕ್ತಪಡಿಸಿ ರಾಷ್ಟ್ರವ್ಯಾಪಿ ‘ಜೈ ಹಿಂದ್‌ ಯಾತ್ರೆ’ಗೆ ಕಾಂಗ್ರೆಸ್‌ ಕರೆ ಕೊಟ್ಟಿದೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಕೌಂಟರ್‌ ಆಗಿ ಪಾಕಿಸ್ತಾನದ ವಿರುದ್ಧ ಗಡಿಯಾಚೆಗಿನ ಪ್ರತೀಕಾರಕ್ಕಾಗಿ ಸರ್ಕಾರ ಮತ್ತು ಸಶಸ್ತ್ರ ಪಡೆಗಳನ್ನು ಕಾರ್ಯವನ್ನು ಕಾಂಗ್ರೆಸ್‌ ಶ್ಲಾಘಿಸಿದೆ. ದೇಶದ ಜನತೆ ಸರ್ಕಾರ ಮತ್ತು ಸಶಸ್ತ್ರ ಪಡೆಗಳ ಹಿಂದೆ ದೃಢವಾಗಿ ನಿಲ್ಲಬೇಕು. ಭಾರತದ ರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸುವ ಸಲುವಾಗಿ ಏಕತೆ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಕಾಂಗ್ರೆಸ್‌ ತಿಳಿಸಿದೆ.

ಭಾರತೀಯ ನೌಕಾಪಡೆ, ಸೇನೆ ಮತ್ತು ವಾಯುಪಡೆಗಳು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ನಿರಂತರವಾಗಿ ಶೌರ್ಯ ಮೆರೆಯುತ್ತಿವೆ. ಆಪರೇಷನ್ ಸಿಂಧೂರ್ [ಗಡಿಯಾಚೆಗಿನ ದಾಳಿಗಳು] ಇದಕ್ಕೆ ಪುರಾವೆಯಾಗಿದೆ. ಪಹಲ್ಗಾಮ್‌ನಲ್ಲಿ ಪಾಕ್‌ ಬೆಂಬಲಿತ ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ಭಾರತೀಯ ಸೇನೆಯು ತಾನು ಪಡೆಯಬಹುದಾದ ಎಲ್ಲಾ ಪ್ರಶಂಸೆಗೆ ಅರ್ಹವಾಗಿದೆ. ಸೇನೆಯ ಉತ್ಸಾಹಕ್ಕೆ ನಾನು ವಂದಿಸುತ್ತೇನೆ ಎಂದು ಕಾಂಗ್ರೆಸ್ ವಕ್ತಾರ ರಾಗಿಣಿ ನಾಯಕ್ ತಿಳಿಸಿದ್ದಾರೆ.

ದೇಶಾದ್ಯಂತ ಕಾಂಗ್ರೆಸ್ ಕಚೇರಿಗಳಿಂದ ‘ಜೈ ಹಿಂದ್ ಯಾತ್ರೆ’ ನಡೆಸಲಾಗುತ್ತಿದೆ. ಭಾರತ ಸರ್ಕಾರ ಮತ್ತು ರಕ್ಷಣಾ ಪಡೆಗಳ ನೈತಿಕತೆಯನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಲು ವಿನಂತಿಸಿದ್ದಾರೆ.

Share This Article