ಟಿಕೆಟ್ ಆಸೆ ಹುಟ್ಟಿಸಿ, ನಮ್ಮದೇ ನಾಯಕರು ಕಾಲೆಳೆಯುವ ಕೆಲಸ ಮಾಡಿದ್ದಾರೆ: ಅಬ್ದುಲ್ ಜಬ್ಬಾರ್

2 Min Read

ಬೆಂಗಳೂರು: ಟಿಕೆಟ್ ಆಸೆ ಹುಟ್ಟಿಸಿ, ನಮ್ಮದೇ ನಾಯಕರು ಕಾಲು ಎಳೆಯುವ ಕೆಲಸ ಮಾಡಿದ್ದಾರೆ ಎಂದು ಎಂಎಲ್‌ಸಿ ಅಬ್ದುಲ್ ಜಬ್ಬಾರ್ (Abdul Jabbar) ಆಕ್ರೋಶ ಹೊರಹಾಕಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿದ್ದಾರೆ. ಬಳಿಕ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನಗೆ ಮೊದಲು ಇವರೇ ಟಿಕೆಟ್ ಆಸೆ ಹುಟ್ಟಿಸಿದ್ದಾರೆ. ನಾನು ಸಾಕಷ್ಟು ವರ್ಷದಿಂದ ಕಾಂಗ್ರೆಸ್‌ನಲ್ಲಿ ಇದ್ದೀನಿ. ಆದರೆ ಈ ನಾಯಕರೇ ನನಗೆ ಅರ್ಹತೆ ಇಲ್ಲ ಅಂತ ಟಿಕೆಟ್ ಕೊಟ್ಟಿಲ್ಲ. ಆಮೇಲೆ ಟಿಕೆಟ್ ಘೋಷಣೆ ಆಗಿ ಚುನಾವಣೆ ಮುಕ್ತಾಯ ಆಗಿದೆ. ಈಗ ಯಾಕೆ ಸೋಲಿನ ಭಯ ಇದ್ಯೋ ಗೊತ್ತಿಲ್ಲ. ನನ್ನನ್ನ ಚುನಾವಣಾ ಪ್ರಚಾರಕ್ಕೆ ಯಾರು ಕರೆದಿಲ್ಲ, ಅದಕ್ಕೆ ನಾನು ಹೋಗಿಲ್ಲ. ಎರಡು ಬಾರಿ ಮಲ್ಲಿಕಾರ್ಜುನ್ ಅವರು ಅವಮಾನ ಮಾಡಿದ್ರು ಕೂಡ ಜಮೀರ್ ಹೋಗಿದ್ದಾರೆ. ನನಗೆ ಆ ರೀತಿ ಅವಮಾನ ಮಾಡಿದ್ರೆ ಹೋಗ್ತಾ ಇರ್ಲಿಲ್ಲ. ಜಮೀರ್ ಪ್ರಚಾರ ಮಾಡಿಲ್ಲ ಅಂತ ಏನಿಲ್ಲ. ಆದರೆ ನಾವು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದೀವಿ ಎನ್ನುವ ಆರೋಪ ಸುಳ್ಳು. ಇದಕ್ಕೆ ಸಾಕ್ಷಿ ಕೊಡಲಿ ಅದನ್ನ ಬಿಟ್ಟು ನಿರಾಧಾರ ಮಾಡೋದು ಸರಿ ಅಲ್ಲ. ಸಚಿವ ಸಂಪುಟ ವಿಸ್ತರಣೆ ಆಗ್ತಾ ಇದೆ. ಈಗ ಫ್ರೇಮ್ ತಗೊಳಕ್ಕೆ ಬಂದಿದ್ದಾರೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಬಿರುಗಾಳಿ – ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ

ನಮ್ಮದೇ ಪಕ್ಷದ ಮುಸ್ಲಿಂ ಮುಖಂಡರು ನಡೆದುಕೊಂಡ ರೀತಿಯಿಂದ ಮನಸ್ಸಿಗೆ ನೋವಾಗಿದೆ. ಹಾಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ನನಗೆ ಟಿಕೆಟ್ ಬೇಕು ಅಂತ ಕೇಳಿರಲಿಲ್ಲ. ನಮಗೆ ಬೇಕು ಅಂತ ಕೇಳಿರಲಿಲ್ಲ. ಶಿವಶಂಕರಪ್ಪ ಹೋದ ಮೇಲೆ ಈಗ ಸಿಗಲಿಲ್ಲ ಅಂದ್ರೆ ಇನ್ಯಾವಾಗ ಕೊಡುತ್ತೀರಾ ಅಂತ ಕೇಳಿದ್ದೆ. ಪಕ್ಷದ ಮುಖಂಡರು ನಡೆದುಕೊಂಡಿರೋದನ್ನ ನೋಡಿದ್ರೆ ಕೆಲವರು ಅರ್ಜೆಂಟ್ ಆಗಿ ಮುಂದೆ ಹೋಗಬೇಕು ಅಂದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಿನ್ನೆ ದಿಢೀರ್ ಸಭೆ ಮಾಡಿರೋದು ಬೇಜಾರಾಗಿ ರಾಜೀನಾಮೆ ಕೊಟ್ಟೆ. ಇಷ್ಟು ದಿನ ಎಲ್ಲಾ ಒಟ್ಟಾಗಿಯೇ ಇದ್ದೇವು. ನಿನ್ನೆಯೇ ನಮಗೆ ಇದೆಲ್ಲ ಗೊತ್ತಾಗಿದೆ. ಚುನಾವಣಾ ಆದ ಕೂಡಲೇ ಹೀಗೆ ಮಾತಾಡಿದ್ರೆ ಏನು ಹೇಳೋದು? ನಮ್ಮದೆ ಜನ ಯಾಕೆ ಹೀಗೆ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡ್ತಿದೆ. ಕೆಲ ನಾಯಕರು ಹೀಗೆ ನಡೆದುಕೊಳ್ಳುತ್ತಿದ್ದಾರೆ. ನಮ್ಮದೇ ನಾಯಕರು ಕಾಲು ಎಳೆಯುವ ಕೆಲಸ ಮಾಡಿದ್ದಾರೆ. ಹಿಂದೆ ಯಾರದ್ದೋ ಷ್ಯಡಂತ್ರö್ಯ ಇದ್ದಂತೆ ಕಾಣಿಸುತ್ತಿದೆ. ಯಾರೇ ಟಾರ್ಗೆಟ್ ಮಾಡಿದ್ರು ಯಾರ ಅದೃಷ್ಟ ಕಸಿಯಲು ಆಗಲ್ಲ. ಇದು ನನ್ನ ಕಂಟ್ರೋಲ್ ಮಾಡೋಕಾ? ಅಥವಾ ನನ್ನ ಮೂಲಕ ಮತ್ತೊಬ್ಬರ ಟಾರ್ಗೆಟ್ ಮಾಡೋಕಾ? ಅನ್ನೋದು ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.

ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಮಾತುಕತೆ ಆಗಿಲ್ಲ. ನಮ್ಮವರೇ ನಮಗೆ ಅರ್ಹತೆ ಇಲ್ಲ ಅಂದಿದ್ದಾರೆ. ದೊಡ್ಡ ನಾಯಕರು ಹೇಳಿದ ಮೇಲೆ ಸರಿಯಾದವರನ್ನ ಹುಡುಕಿ ಅಧ್ಯಕ್ಷರನ್ನ ಮಾಡಲಿ ಅಂತ ರಾಜೀನಾಮೆ ಕೊಟ್ಟೆ. ನಮ್ಮನ್ನ ಸೈಡ್ ಲೈನ್ ಮಾಡೋಕೆ ಆಗಲ್ಲ. ಜನ ನಮ್ಮನ್ನ ಗುರುತಿಸುತ್ತಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದಾವಣಗೆರೆ ದಕ್ಷಿಣ ದಂಗಲ್ ಎಫೆಕ್ಟ್ – ಸ್ವಪಕ್ಷದಲ್ಲೇ ಸಚಿವ ಜಮೀರ್‌ಗೆ ಟ್ರಬಲ್, ತಿರುಗಿಬಿದ್ದ ಮತ್ತೊಂದು ಮುಸ್ಲಿಂ ಬಣ

Share This Article