ರಾಜ್ಯಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಶಾಸಕರಿಗೆ ವಿಪ್‌ ಜಾರಿ

Public TV
1 Min Read

– ಅಡ್ಡಮತದಾನ ಮಾಡಿದ್ರೆ ಶಾಸಕ ಸ್ಥಾನದಿಂದ ವಜಾ – ಅಶೋಕ್ ಪಟ್ಟಣ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆಗೆ ಕಡ್ಡಾಯ ಹಾಜರಾತಿಗೆ ಕಾಂಗ್ರೆಸ್ ಶಾಸಕರಿಗೆ ವಿಪ್ (WIP) ಜಾರಿ ಮಾಡಲಾಗಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ (Ashok Pattan) ತಿಳಿಸಿದ್ದಾರೆ.

ವಿಧಾನನಸೌಧದಲ್ಲಿ (Vidhan Soudha) ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ (Congress MLAs) ವಿಪ್ ಕೊಟ್ಟಿದ್ದೀವಿ. ಸಂಜೆ 6 ಗಂಟೆಗೆ ಕಂಪಲ್ಸರಿ ಹಾಜರಾಗಲು ಹೇಳಿದ್ದೀವಿ ಹಿಲ್ಟನ್ ಹೋಟೆಲ್‌ಗೆ ಬರುವಂತೆ ವಾಟ್ಸಪ್‌ನಲ್ಲಿ ಸಂದೇಶ ಕಳಿಸಿದ್ದೀವಿ, ವೈಯಕ್ತಿಕವಾಗಿಯೂ ಫೋನ್‌ ಮಾಡಿ ಹೇಳಿದ್ದೀವಿ. ಎಲ್ಲಾ ಶಾಸಕರು ರಾತ್ರಿ ಅಲ್ಲೇ ಉಳಿದುಕೊಳ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಸಿದ ಕಬಿನಿ ಡ್ಯಾಂ ನೀರಿನ ಮಟ್ಟ – ಬೆಂಗಳೂರು, ಮೈಸೂರಿಗೆ ಹೆಚ್ಚಾಗಲಿದೆ ನೀರಿನ ಸಮಸ್ಯೆ

ಮಂಗಳವಾರ ಬೆಳಗ್ಗೆ ಎಲ್ಲಾ ಶಾಸಕರು ಹೋಟೆಲ್‌ನಿಂದ ಬಸ್‌ನಲ್ಲಿ ಬರ್ತೀವಿ. ಬಸ್ ವ್ಯವಸ್ಥೆ ಆಗಿದೆ, ಎಲ್ಲರೂ ಒಟ್ಟಿಗೆ ಬಂದು ಮತ ಹಾಕಿ ಹೋಗ್ತೀವಿ. ವೋಟಿಂಗ್‌ ಪ್ಯಾಟ್ರನ್ ಟ್ರೈನಿಂಗ್ ಕೊಡೋಕೆ, ಯಾವ ರೀತಿ ಮಾರ್ಕ್ ಮಾಡಬೇಕು ಅಂತಲೇ ಶಾಸಕಾಂಗ ಪಕ್ಷದ ಸಭೆ ಕರೆದಿರೋದು. ಅಡ್ಡ ಮತದಾನದ ಭೀತಿನೇ ಇಲ್ಲ. ಏಕೆಂದರೆ ತೋರಿಸಿ ವೋಟ್ ಹಾಕಬೇಕು, ಆದ್ದರಿಂದ ಯಾರೂ ಬೇರೆಯವರಿಗೆ ಮತ ಹಾಕಲ್ಲ. ಅಡ್ಡ ಮತದಾನ ಮಾಡಿದ್ರೆ ಸ್ಪೀಕರ್‌ಗೆ ದೂರು ಕೊಟ್ಟು ಶಾಸಕ ಸ್ಥಾನದಿಂದ ವಜಾ ಗೊಳಿಸ್ತೀವಿ, ಕ್ರಮ ಕೈಗೊಳ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಟೂರ್ನಮೆಂಟ್‍ಗಳಲ್ಲಿ ಆಡುವ ಅವಕಾಶ ಕೊಡಿಸೋದಾಗಿ 12 ಲಕ್ಷ ರೂ. ವಂಚಿಸಿದ ಕೋಚ್!

Share This Article