ಬೆಂಗಳೂರು: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಿತ್ರದುರ್ಗ (Chitradurga) ಶಾಸಕ ವೀರೇಂದ್ರ ಪಪ್ಪಿಯವರನ್ನು (Veerendra Puppy) 35ನೇ ಸಿಸಿಹೆಚ್ ನ್ಯಾಯಾಲಯ 4 ದಿನ ಇಡಿ (Enforcement Directorate) ಕಸ್ಟಡಿಗೆ ಒಪ್ಪಿಸಿದೆ.
ಜನಪ್ರತಿನಿಧಿಗಳ ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆ 35ನೇ ಸಿಸಿಹೆಚ್ ಜಡ್ಜ್ ಮುಂದೆ ಇಡಿ ಹಾಜರುಪಡಿಸಿತ್ತು. ಶನಿವಾರ ವೀರೇಂದ್ರ ಪಪ್ಪಿ ಸಿಕ್ಕಿಂನ ಗ್ಯಾಂಗ್ಟಕ್‍ನಲ್ಲಿ ಬಂಧಿಸಲಾಗಿತ್ತು. ಶನಿವಾರ ರಾತ್ರಿಯೇ ಸಿಕ್ಕಿಂನಿಂದ ಬೆಂಗಳೂರಿಗೆ ಕರೆತಂದಿದ್ದ ಇಡಿ ಇವತ್ತು ಬೆಳಗ್ಗೆ ಬೌರಿಂಗ್ ಹಾಸ್ಪಿಟಲ್‍ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಶಾಂತಿನಗರ ಇಡಿ ಕಚೇರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಇದನ್ನೂ ಓದಿ: ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್
ದಾಳಿ ವೇಳೆ ಶಾಸಕ ಪಪ್ಪಿ ಮನೆಯಲ್ಲಿ 12 ಕೋಟಿ ರೂ. ನಗದು, 1 ಕೋಟಿ ರೂ. ವಿದೇಶಿ ಹಣ, 6 ಕೋಟಿ ರೂ. ಮೌಲ್ಯದ ಚಿನ್ನ, 10 ಕೆಜಿ ಬೆಳ್ಳಿ, ಐಷಾರಾಮಿ ಕಾರು, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್‌ಗಳನ್ನು ಇಡಿ ಸೀಜ್ ಮಾಡಿತ್ತು. ಇಡಿ 14 ದಿನ ತಮ್ಮ ಕಸ್ಟಡಿಗೆ ನೀಡಿ ಅಂತ ರಿಮ್ಯಾಂಡ್‍ನಲ್ಲಿ ಮನವಿ ಮಾಡಿತ್ತು. ಇದೇ ವೇಳೆ ವಿರೇಂದ್ರ ಪಪ್ಪಿ ಸಹೋದರ ಕೆ.ಸಿ. ನಾಗರಾಜ್ ಹಾಗೂ ಬೆಂಬಲಿಗರು ಇಡಿ ಕಚೇರಿ ಮುಂದೆ ಜಮಾಯಿಸಿದ್ದರು.
ಚಿತ್ರದುರ್ಗ ಜಿಲ್ಲೆಯಾದ್ಯಂತ 6, ಬೆಂಗಳೂರು ನಗರ 10, ಜೋಧ್‌ಪುರ 3, ಹುಬ್ಬಳ್ಳಿ 1, ಮುಂಬೈ 2 ಮತ್ತು ಗೋವಾದಲ್ಲಿರುವ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿದೆ. ವೀರೇಂದ್ರ ಪಪ್ಪಿ ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ.
ವೀರೇಂದ್ರ ಪಪಿ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ 3 ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಘಟಕಗಳು ಕೆಸಿ ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಇ.ಡಿ ತಿಳಿಸಿದೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ; `ಕೈʼ ಶಾಸಕ ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ ED ವಶಕ್ಕೆ