ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

Public TV
1 Min Read

ಬೆಂಗಳೂರು: ಜನರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು. ಹೌದು. ಈ ಪ್ರಕರಣದಲ್ಲಿ ಹಾಗೆ ಅನಿಸುತ್ತೆ. ಯಾಕಂದ್ರೆ ಬೆಂಗಳೂರಿನ ಏರ್‍ಪೋರ್ಟ್ ರಸ್ತೆಯಲ್ಲಿರುವ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್‍ನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆಯಾಗ್ತಿದೆ.

ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟ ಮಾಡೋ ಹಾಗಿಲ್ಲ ಎಂಬ ನಿಯಮವಿದ್ದರೂ ಮದ್ಯ ಪೂರೈಕೆಯಾಗ್ತಿದೆ. ಈ ರೆಸ್ಟೋರೆಂಟ್ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತೆ. ರೆಸ್ಟೋರೆಂಟ್ ನಡೆಸುವುದಕ್ಕೆ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿಲ್ಲ. ಈ ರೆಸ್ಟೋರೆಂಟ್ ಉದ್ಘಾಟನೆಯಾಗಿ ಇದೀಗ ಇಪ್ಪತ್ತೆರೆಡು ದಿನಗಳೇ ಕಳೆದಿದೆ. ಶಾಸಕರ ಮಾಲೀಕತ್ವದ್ದು ಯಾರೂ ಕೇಳೋರಿಲ್ಲ ಅಂತ ನಂಬಿದ್ದಾರೆ.

ಈ ಕುರಿತು ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲು ನಿರ್ಧರಿಸಿದ್ದು, ಲೈಸೆನ್ಸ್ ಪಡೆಯದ ಬಗ್ಗೆ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳೋ ಭರವಸೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *