ಕೊಪ್ಪಳ: ಸ್ವಪಕ್ಷಿಯರಿಂದಲೇ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ತರಾಟೆಗೊಳಗಾದ ಘಟನೆ ಜಿಲ್ಲೆಯ 19ನೇ ವಾರ್ಡ್‍ನ ಹಟಗಾರ ಪೇಟೆಯಲ್ಲಿ ನಡೆದಿದೆ.
ಹಟಗಾರ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಜುಬೇರ್ ಹುಸೇನಿ, ಶಾಸಕ ಹಿಟ್ನಾಳ್ ಅವರ ಕೆಲಸಗಳ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಜನ ಸೂರಿಲ್ಲದೇ ಪರದಾಡಿದ್ರೂ ಮನೆ ಕೊಟ್ಟಿಲ್ಲ. ಅಮಾಯಕರ ಮೇಲೆ ಪೊಲೀಸರು ರೌಡಿ ಶೀಟರ್ ತೆರೆದಿದ್ದಾರೆ. ವಿನಾಃಕಾರಣ ಯುವಕರಿಗೆ ಕಿರಿಕಿರಿ ನೀಡಲಾಗ್ತಿದೆ. ಇಷ್ಟಾದ್ರೂ ಶಾಸಕರು ಸಹಾಯಕ್ಕೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡ್ರು.
ಸ್ವಪಕ್ಷೀಯರ ಪ್ರಶ್ನೆಗಳ ಸುರಿಮಳೆಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮುಜುಗರಕ್ಕೀಡಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
https://www.youtube.com/watch?v=IkFuTozndJk