ಕೊಲೆ ಕೇಸ್‌ – ಕಾಂಗ್ರೆಸ್‌ ಶಾಸಕರ ಕಾರು ಚಾಲಕ ಪೊಲೀಸ್‌ ವಶಕ್ಕೆ

Public TV
1 Min Read

ಚಿತ್ರದುರ್ಗ: ಕೊಲೆ ಪ್ರಕರಣವೊಂದರಲ್ಲಿ ಹೊಸದುರ್ಗ ಕಾಂಗ್ರೆಸ್ ಶಾಸಕ ಬಿ.ಜಿ.ಗೋವಿಂದಪ್ಪ (B.G.Govindappa) ಅವರ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರು ಚಾಲಕ ಯಶವಂತ್‌ ಸೇರಿ ನಾಲ್ವರನ್ನು ಹೊಸದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 17 ರಂದು ಜಾನಕಲ್ ಗ್ರಾಮದ ಪ್ರಸನ್ನ (45) ನಾಪತ್ತೆಯಾಗಿದ್ದರು. ಮಾರ್ಚ್ 21 ರಂದು ಈ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಲಿಂಗದಳ್ಳಿ ಬಳಿ ಪ್ರಸನ್ನ ಶವವಾಗಿ ಪತ್ತೆಯಾಗಿದ್ದರು. ಇದನ್ನೂ ಓದಿ: ಬಸವಣ್ಣ ದೇವರ ಮಠದ ಶಿಕ್ಷಕಿ, ಹೆಡ್‌ ಕಾನ್ಸ್‌ಟೇಬಲ್‌ ಹೃದಯಾಘಾತದಿಂದ ಸಾವು

ಜುಲೈ 20 ರಂದು ಪ್ರಸನ್ನ ಕೊಲೆ ಪ್ರಕರಣ ಬಯಲಾಗಿದೆ. ಪ್ರಕರಣ ಸಂಬಂಧ ಪ್ರಸನ್ನ ಪತ್ನಿ, ಶಾಸಕ ಬಿ.ಜಿ.ಗೋವಿಂದಪ್ಪ ಕಾರು ಚಾಲಕ ಯಶವಂತ್, ಲೋಹಿತ್, ವೀರೇಶ್ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆ ಮಾಡಿ ಲಿಂಗದಳ್ಳಿ ಬಳಿ ಅರಣ್ಯದಲ್ಲಿ ಶವ ಎಸೆಯಲಾಗಿತ್ತು. ಲಿಂಗದಳ್ಳಿ ಮತ್ತು ಹೊಸದುರ್ಗ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಇದನ್ನೂ ಓದಿ: ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌ – ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ?

Share This Article