ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ – ಮುಡಾ ಕೇಸ್ ಬಗ್ಗೆ ಕೆ.ಎನ್ ರಾಜಣ್ಣ ರಿಯಾಕ್ಷನ್

Public TV
2 Min Read

ಹಾಸನ: ಮುಡಾ ಪ್ರಕರಣ (MUDA Case) ಬಿಜೆಪಿಯ ಸೃಷ್ಟಿ ಅಷ್ಟೇ. ಸಿಎಂ ಆಗಿರೋರಿಗೆ ಮೂರ‍್ನಾಲ್ಕು ಸೈಟ್ ಯಾವ ಲೆಕ್ಕ ಹೇಳಿ ಅಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದ್ದಾರೆ.

ಹಾಸನದಲ್ಲಿ (Hassan) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮುಡಾ ಹಗರಣದಲ್ಲಿ ಸಿಎಂ ಪಾತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಹೊಸ ಕಾನೂನು – ಸುಗ್ರೀವಾಜ್ಞೆ ಮೂಲಕ ಅಂಕುಶ: ಸಿಎಂ

ಯಾರು ದೂರು ಕೊಟ್ಟು ಹೇಳಿಕೆ ಕೊಡ್ತಿದ್ದಾರೋ ಅವರದ್ದೇ ಪಾತ್ರ ಇದ್ದಂತಿದೆ. ಇನ್ನು ಸ್ವಲ್ಪದಿನ, ಎಲ್ಲವೂ ಆಚೆ ಬರುತ್ತದೆ. ಯಾರದ್ದು ಎಷ್ಟು ಸೈಟು ಇದೆ, ಎಲ್ಲವೂ ಆಚೆ ಬರುತ್ತೆ. ಮುಡಾ ಇರಲಿ, ಬಿಡಿಎ ಇರಲಿ, ಎಲ್ಲೇ ಕಾನೂನು ಬಾಹಿರ ಚಟುವಟಿಕೆ ಆಗಿದ್ದರೂ ಶಿಕ್ಷೆ ಆಗಬೇಕು. ಸಾರ್ವಜನಿಕ ಆಸ್ತಿಯನ್ನು ಯಾರೇ ಲಪಟಾಯಿಸಿದ್ರೂ ಅದು ಮೋಸದ ಕೆಲಸ. ಹಾಗೆ ಮಾಡಿದವರಿಗೆ ಶಿಕ್ಷೆಯಾಗಬೇಕು ಅನ್ನುವವನು ಅಂತ ಸಚಿವರು ಹೇಳಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ಸಿಎಂ ಹಾಗೂ ಪತ್ನಿಗೆ ಕ್ಲೀನ್‌ಚಿಟ್ ವಿಚಾರ ಕುರಿತು ಮಾತನಾಡಿದ ಸಚಿವರು, ಜ.25ರ ಒಳಗೆ ವರದಿ ನೀಡಬೇಕಿತ್ತು ಅನ್ನೋದು ಸರ್ಕಾರದ ನಿರ್ದೇಶನ ಅಲ್ಲ. ಅದು ಕೋರ್ಟ್ ನಿರ್ದೇಶನ, ಹಾಗಾಗಿ ವರದಿ ನೀಡಿದ್ದಾರೆ. ವರದಿ ಹೊರಗೆ ಬಂದ ನಂತರ ಪ್ರತಿಕ್ರಿಯೆ ಕೊಡೋಣ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧ 7.80 ಲಕ್ಷ ದೂರುಗಳು ಬರುವವರೆಗೂ ಬಾಳೆಹಣ್ಣು ತಿನ್ನುತ್ತಿದ್ರಾ?: ಎನ್.ರವಿಕುಮಾರ್ ಆಗ್ರಹ

ಇನ್ನೂ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿ, ಹೀಗೆ ಕಿರುಕುಳ ಕೊಡೋರಿಗೆ ಕಠಿಣ ಶಿಕ್ಷೆ ಆಗಬೇಕು. ಹಾಸನ ಜಿಲ್ಲೆಯಲ್ಲೂ ಈ ಸಮಸ್ಯೆ ಸಾಕಷ್ಟಿದೆ. ಕೆಲ ಸಂಸ್ಥೆಗಳು ಆರ್‌ಬಿಐ ಅನುಮತಿ ಪಡೆದು ಫೈನಾನ್ಸ್‌ ನಡೆಸುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ಕೊಟ್ಟಾಗ ನಾವು ಕ್ರಮ ಕೈಗೊಳ್ಳಬಹುದು. ಹಾಗಾಗಿ ಸಿಎಂ ಸಭೆ ಮಾಡಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಇಂತಹ ಕಿರುಕುಳ ತಡೆಗೆ ಹೊಸ ಕಾಯ್ದೆ ತರುವ ಬಗ್ಗೆಯೂ ಚರ್ಚೆ ಆಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಆಗಲಿದೆ. ನಿನ್ನೆ ಸಿಎಂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಅದಕ್ಕಾಗಿ ನಿನ್ನೆ ರಜೆ ಇದ್ದರೂ ಸಿಎಂ ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಸಭೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Share This Article