ಡಿಕೆಶಿ ಕಡುಕೋಪಕ್ಕೆ ಕಾರಣ ಕಾಂಗ್ರೆಸ್ಸಿಗರ ಸಿದ್ದು ಭಕ್ತಿ!

By
2 Min Read

ಬೆಂಗಳೂರು: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಇತ್ತ, ರಾಜ್ಯದಲ್ಲಿ ಶತಾಯಗತಾಯ ಕಾಂಗ್ರೆಸ್ (Congress) ಅಸ್ತಿತ್ವಕ್ಕೆ ತರಲು ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ ಶಿವಕುಮಾರ್ (D.K Shivakumar)  ಒಂದಲ್ಲೊಂದು ರಾಜಕೀಯ ಸಾಹಸ ಮಾಡುತ್ತಲೇ ಇದ್ದಾರೆ. ಜೊತೆಗೆ ಇಬ್ಬರ ನಡುವೆ ಮುಸುಕಿನ ಗುದ್ದಾಟ ಕೂಡ ನಡೆಯುತ್ತಿದೆ.

ಕಾಂಗ್ರೆಸ್‍ನಲ್ಲಿ ಬಣ ರಾಜಕೀಯ ಹೊಗೆಯಾಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಜನರು ಸಾಗರೋಪಾದಿಯಲ್ಲಿ ಬರುತ್ತಿದ್ರೆ, ಇತ್ತ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕರು ಅಷ್ಟಾಗಿ ಆಸಕ್ತಿ ತೋರದೆ ಇರುವುದು ಡಿಕೆಶಿ ಸಿಟ್ಟಿಗೆ ಕಾರಣವಾಗಿದೆ. ಹೌದು, ಈ ಬಾರಿ ರಾಜ್ಯ ಕಾಂಗ್ರೆಸ್‍ನಲ್ಲಿ ಮೇಕೆದಾಟು (Mekedatu) ಪಾದಯಾತ್ರೆ, ಸಿದ್ದರಾಮೋತ್ಸವ (Siddaramotsava) ಹಾಗೂ ಪ್ರೀಡಂ ಮಾರ್ಚ್ ಎಂಬ ಮೂರು ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಮೂರು ಕಾರ್ಯಕ್ರಮಗಳಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದು, ಸಿದ್ದರಾಮೋತ್ಸವ ಮಾತ್ರ, ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್ ಶಾಸಕರು ತಮ್ಮತಮ್ಮ ಕ್ಷೇತ್ರದಿಂದ ಸಾವಿರಾರು ಮಂದಿಯನ್ನು ಕಳುಹಿಸಿಕೊಟ್ಟಿದ್ರು. ಆದ್ರೆ ಡಿಕೆಶಿ ನೇತೃತ್ವದ ಮೇಕೆದಾಟು ಪಾದಯಾತ್ರೆ ಹಾಗೂ ಫ್ರೀಡಂ ಮಾರ್ಚ್‍ಗೆ ಅದ್ಯಾಕೋ ಶಾಸಕರು ಜನರನ್ನು ಕರೆತಂದು ಸಹಕರಿಸಲಿಲ್ಲ. ಇದು ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಸಕ್ಕರೆನಗರಿ ಮಂಡ್ಯದಲ್ಲಿ ಡಿಕೆಶಿ-ನಿಖಿಲ್ ಮುಖಾಮುಖಿ

ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಭಕ್ತ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra)  ಬಹಳ ಯಶಸ್ವಿಯಾಗಿ ಮಾಡಬೇಕು ಎಂದು ಕನಸು ಕಾಣುತ್ತಿರುವ ಕನಕಪುರ ಬಂಡೆಗೆ ಇದು ನುಂಗಲಾರದ ತುತ್ತಾಗಿದೆ. ಮೊನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಆಕ್ರೋಶ ಹೊರಹಾಕಿರುವ ಡಿ.ಕೆ.ಶಿವಕುಮಾರ್, ಕೆಲಸ ಮಾಡಿದವರಿಗಷ್ಟೆ ಟಿಕೆಟ್ ಎಂದು ಹೇಳುವ ಮೂಲಕ ಸಿದ್ದು ಬಣಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷರ ಎಚ್ಚರಿಕೆಗೆ ಕಾಂಗ್ರೆಸ್ ಶಾಸಕರು ಹೇಗೆ ಸ್ಪಂದಿಸಲಿದ್ದಾರೆ ಹಾಗೂ ರಾಜ್ಯದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಗೆ ಎಷ್ಟು ಜನರನ್ನು ಸೇರಸಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಮುಖಂಡನ ಬಂಧನ

ಈ ನಡುವೆ ರಾಜ್ಯ ಕಾಂಗ್ರೆಸ್‍ನಲ್ಲಿ ಬಣ ರಾಜಕೀಯದ ಹೊಗೆ ಮತ್ತೆ ಉಲ್ಬಣಿಸಿದೆ. ಪಂಜಾಬ್‍ನ ಸ್ಥಿತಿ ಕರ್ನಾಟಕ ಕಾಂಗ್ರೆಸ್‍ನಲ್ಲೂ ಆಗುವ ಎಲ್ಲಾ ಲಕ್ಷಣಗಳು ಆದಾಗಲೇ ಗೋಚರಿಸುತ್ತಿದ್ದು, ಕೂಡಲೇ ಈ ಬಗ್ಗೆ ಕೈ ಹೈಕಮಾಂಡ್ ಎಚ್ಚೆತ್ತು ಸರಿಪಡಿಸುವ ಅವಶ್ಯಕತೆ ಇದೆ. ಪಂಜಾಬ್‍ನಲ್ಲಿ (Punjab) ಅಮರಿಂದರ್ ಸಿಂಗ್ (Amarinder Singh) ಹಾಗೂ ನವಜೋತ್ ಸಿಂಗ್ ಸಿಧು (Navjot Singh Sidhu) ನಡುವೆ ಉಂಟಾದ ಕಾಳಗದಿಂದ ಪಂಜಾಬ್‍ನಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಆಯಿತು. ಆದ್ರೆ ಕರ್ನಾಟಕ ರಾಜ್ಯ ಕಾಂಗ್ರೆಸ್ ವಿಚಾರದಲ್ಲಿ ಅಂತಹದ್ದೇ ನಿರ್ಲಕ್ಷ್ಯ ಉಂಟಾದ್ರೆ, ರಾಜ್ಯದಲ್ಲೂ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಎಪಿಸೋಡ್‍ಗೆ ಆದಷ್ಟು ಬೇಗ ಬ್ರೇಕ್ ಹಾಕುವಂತೆ ಪಕ್ಷ ನಿಷ್ಟರ ಪಡೆ ಎಐಸಿಸಿ ಮೊರೆ ಹೋಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *