ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಒಬ್ಬ ಹೇಡಿ ಮತ್ತು ಅಂಜುಬುರಕ ನಾಯಕ ಎಂದು ಬಿಹಾರ ಕಾಂಗ್ರೆಸ್ ಮಾಜಿ ಸಂಸದ ಶಕೀಲ್ ಅಹ್ಮದ್ (Shakeel Ahmad) ನೀಡಿರುವ ಹೇಳಿಕೆ ಕಾಂಗ್ರೆಸ್ನಲ್ಲಿ (Congress) ಕೋಲಾಹಲ ಎಬ್ಬಿಸಿದೆ.
ಕಾಂಗ್ರೆಸ್ನ ಒಬ್ಬ ಮುಸ್ಲಿಂ ನಾಯಕ ಹೇಳಿರುವುದು ಪಕ್ಷಕ್ಕೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೇಳಿಕೆ ನೀಡಿದ ಬಳಿಕ ಈಗ ನನಗೆ ಜೀವ ಬೆದರಿಕೆ ಬರುತ್ತಿದೆ ಎಂದು ಶಕೀಲ್ ಅಹ್ಮದ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನದ ಮೇಲೆ ಕಂಟ್ರಿ ಬಾಂಬ್ ಎಸೆದಿದ್ದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ
अब तो मेरी जानकारी बिल्कुल सही साबित हुई। काँग्रेस के पुराने साथियों का बहुत धन्यवाद।
हमारे बिहार में एक कहावत कि
पुराने दोस्त ही काम आते हैं।
क्या यह राहुल जी के आदेश के बिना हो रहा है? pic.twitter.com/qtgBCemfH4— Dr Shakeel Ahmad (@Ahmad_Shakeel) January 26, 2026
ಪ್ರತಿಕೃತಿ ದಹನದ ನೆಪದಲ್ಲಿ ಪಾಟ್ನಾ ಮತ್ತು ಮಧುಬನಿಯಲ್ಲಿರುವ ನನ್ನ ಮನೆ ಮೇಲೆ ದಾಳಿ ನಡೆಸುವಂತೆ ರಾಹುಲ್ ಗಾಂಧಿ ಆದೇಶ ಹೊರಡಿಸಿರುವುದಾಗಿ ಕಾಂಗ್ರೆಸ್ ಸಹೋದ್ಯೋಗಿಗಳಿಂದಲೇ ಮಾಹಿತಿ ತಿಳಿದು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಹಲವು ಸ್ನೇಹಿತರಿಂದಲೇ ಪದೇ ಪದೇ ಕರೆಗಳು ಬರುತ್ತಿವೆ. ಅವರ ಮನೆ ಮೇಲೆ ದಾಳಿ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

