PSI ದೈಹಿಕ ಪರೀಕ್ಷೆಯಲ್ಲೂ ಅಕ್ರಮ, ಥರ್ಮಾಕೋಲ್, ವಿಗ್ ಧರಿಸಿ ನೇಮಕ- ಪ್ರಿಯಾಂಕ್ ಖರ್ಗೆ ಆರೋಪ

Public TV
2 Min Read

ಕಲಬುರಗಿ: ಬೆಳಗಾವಿ ಡಿಎಆರ್ ಮೈದಾನದಲ್ಲಿ ಉಮೇಶ್ ಎಂಬ ವ್ಯಕ್ತಿ ತಲೆ ಮೇಲೆ ಕಪ್ಪು ಬಣ್ಣದ ವಸ್ತು ಇಟ್ಟು ಪರೀಕ್ಷೆ ಪಾಸಾಗಲು ಬಂದು ಸಿಕ್ಕಿ ಬಂದಿದ್ದಾನೆ. ಈತ ಹೈಟ್ ಇರದ ಹಿನ್ನೆಲೆ ತಲೆ ಮೇಲೆ ಥರ್ಮಾಕೂಲ್ ಹಾಕಿ ಅದರ ಮೇಲೆ ವಿಗ್ ಹಾಕಿ ಪರೀಕ್ಷೆಗೆ ಬಂದಿದ್ದಾನೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿಯಲ್ಲಿ ಮರುಪರೀಕ್ಷೆ ನೋಟಿಫಿಕೇಶನ್ ಹೊರಡಿಸಿದೆ. ಸದ್ಯ ರಿಟರ್ನ್ ಎಕ್ಸಾಂಗೇ ಮಾತ್ರ ರೀ ಎಕ್ಸಾಂ ಅಂತಾ ಸರ್ಕಾರ ಹೇಳಿದೆ. ಆದರೆ ದೈಹಿಕ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆದಿದೆ ಅಂತಾ ಅಭ್ಯರ್ಥಿಗಳು ದೂರು ನೀಡಿದ್ರು. ಇದರ ಬಗ್ಗೆ ನಾನು ಮಾತನಾಡಿದ್ರೆ ಹಿಟ್ & ರನ್ ಅಂದ್ರು. ಸರ್ಕಾರದ ಬಳಿ ದೂರುಗಳು, ದಾಖಲೆಗಳು ಇಲ್ವಾ. ಬೆಳಗಾವಿ ರೂರಲ್ & ನಗರದಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ಮಾಡಿದೆ ಎಂದರು.

ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ದೈಹಿಕ ಪರೀಕ್ಷೆ ಬಾಳೆಶ ಸಣ್ಣಪ್ಪ ಮೇಲೆ ಎಫ್‍ಐಆರ್ ಆಗಿದೆ. ಬೇರೆಡೆ ಸಹ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. 250 ಜನ ಅಕ್ರಮದಿಂದ ಆಯ್ಕೆ ಅಂತಾ ಹೇಳುತ್ತಾರೆ. ಅದರಲ್ಲಿ ಬರೀ 19 ಅಭ್ಯರ್ಥಿಗಳನ್ನು ಮಾತ್ರ ಬಂಧಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಿಎಸ್‍ಐ ಅಕ್ರಮ: ಸಿಐಡಿಗೆ ಶರಣಾದ ಆರೋಪಿ ಮಂಜುನಾಥ್

ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಸೆಂಟರ್ ನ ಮೇಲ್ವಿಚಾರಕರು ಪರೀಕ್ಷೆಯ ಕೋಡ್ ಕೊಡ್ತಿದ್ದಾರೆ ಅಂತಾ ಕೆಪಿಎಸ್‍ಸಿಗೆ ದೂರು ಸಲ್ಲಿಸಿದ್ದರು. ಎಫ್‍ಡಿಎ ಎಕ್ಸಾಮ್‍ಗೆ ಸಂಬಂಧ ಪಟ್ಟ ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಸುವ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಕೋಡ್ ಗಳನ್ನ ಸೋರಿಕೆ ಮಾಡಿದ್ದಾರೆ. ಆದರೆ ಮೇಲ್ವಿಚಾರಕರನ್ನ ಬದಲಾವಣೆ ಮಾಡಿರೋದಿಲ್ಲ ಎಂದು ಹೇಳಿದರು.

ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಎಜುಕೇಷನ್ ಹಬ್ ಅಲ್ಲ. ಸರ್ಕಾರದ ಕೆಲೆಕ್ಷನ್ ಹಬ್ ಆಗಿರೋದು. ಸಾಕಷ್ಟು ಆರೋಪಗಳಿದ್ರು ಕೂಡ ಸರ್ಕಾರ ಯಾಕೆ ಇದಕ್ಕೆ ಸೆಂಟರ್ ಆಗಿ ಕೊಟ್ಟಿದ್ದರು. ಇದರ ಹಿಂದೆ ಯಾರಿದ್ದಾರೆ ಅನ್ನೋದು ಬಯಲಾಗಬೇಕಿದೆ. ಸರ್ಕಾರಕ್ಕೆ ಇದು ಎಕ್ಸಾಂ ಸೆಂಟರ್ ಕೆಲೆಕ್ಷನ್ ಸೆಂಟರ್ ಆಗಿದೆಯಾ..? ದಿವ್ಯಾ ಆರ್ ಡಿ ಹಿಡಿದ್ರೆ ಮುಗಿದಿಲ್ಲ ಇದರ ಹಿಂದೆ ಬೇರೆಯವರು ಇದ್ದಾರೆ ಅಂತಾ ಹೇಳಿದ್ದೀನಿ ಎಂದು ತಿಳಿಸಿದರು.

PSI KINGPIN

ಇದೇ ವೇಳೆ ಬಿಜೆಪಿಯಲ್ಲಿ ಹೊಸ ಮುಖಗಳು ಬರಬೇಕು ಅನ್ನೋ ಬಿ.ಎಲ್ ಸಂತೋಷ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಲಬುರಗಿ ಯಿಂದಲೇ ಅದನ್ನು ಪ್ರಾರಂಭ ಮಾಡಲಿ. ಅಪ್ಪು ಗೌಡ, ಮಾಲೀಕಯ್ಯ, ವಿಜಯೇಂದ್ರ, ರಾಘವೇಂದ್ರ ಅವರಿಗೆ ಕೋಡಬೇಡಿ. ಯಾರೆಲ್ಲರು ವಂಶಸ್ಥರು ಇದ್ದಾರೆ. ಅಂತ ಅವರಿಗೆ ಗೊತ್ತಿದೆ. ಅವರು ರಾಷ್ಟ್ರ ವಾದಿಗಳಿದ್ದಾರೆ ಹಾಗಾದ್ರೆ ವಿಜಯೇಂದ್ರಗೆ ಟಿಕೆಟ್ ಕೊಡಬಾರದು. ಮೊದಲು ಬಿಸಿಸಿಐ ಜಯ್ ಶಾ ಅವರನ್ನು ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *