ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ: ಸುಮಲತಾ ವಿರುದ್ಧ ರವೀಂದ್ರ ವಾಗ್ದಾಳಿ

Public TV
2 Min Read

ಮಂಡ್ಯ: ಇನ್ಮುಂದೆ ಸ್ವಾಭಿಮಾನಿ ಅನ್ನೋ ಪದ ಬಳಸಬೇಡಿ, ನೀವು ಕೊಲೆಗಡುಕರಾಗಿದ್ದೀರಿ, ಕತ್ತು ಹಿಸುಕುದ್ದೀರಿ. ತಾವೂ ಬೆನ್ನಿಗೆ ಚೂರಿ ಹಾಕುವವರು ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ (Ravindra) ವಾಗ್ದಾಳಿ ನಡೆಸಿದರು.

ಸುಮಲತಾ ಅಂಬರೀಶ್ ಬಿಜೆಪಿಗೆ (BJP) ಬೆಂಬಲ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಸುಮಲತಾ ಅವರಿಗೆ ಜಿಲ್ಲೆಯ ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ಹಲವರ ಹೋರಾಟದಿಂದಾಗಿ ಸುಮಲತಾ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಅವರು ಗೆಲುವು ಸಾಧಿಸಿದ ಬಳಿಕ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎನ್ನುವ ಪ್ರಯತ್ನವನ್ನು ಮಾಡಲಿಲ್ಲ. ಅಷ್ಟೇ ಅಲ್ಲದೇ ಅವರಿಗೆ ಅದ್ಯಾರು ಮಾರ್ಗದರ್ಶಕರು ಗೊತ್ತಿಲ್ಲ, ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಎಂದು ನಮಗೆ ಹೇಳಬೇಕಿತ್ತು. ಆ ಯೋಗ್ಯತೆ ನಮಗಿಲ್ಲ ಅಂತಾ ಯಾಕೆ ಅನ್ಕೊಂಡರು? ಇವತ್ತು ಯಾಕೆ ಸ್ವಾಭಿಮಾನಿ ಅಂತಾ ಪದೇ ಪದೇ ಬಳಸುತ್ತಾರೆ. ಸ್ವಾಭಿಮಾನಕ್ಕೂ ಅವರಿಗೂ ಎಲ್ಲಿಂದೆಲ್ಲಿ ಸಂಬಂಧ ಯಾವ ಸ್ವಾಭಿಮಾನಿ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾದಿದ್ದು ಒಂದೇ ಜಿಲ್ಲೆಗೆ ಭಾಗ್ಯ ಎಂದು ಕಿಡಿಕಾರಿದರು.

ಇವತ್ತು ನರೇಂದ್ರ ಮೋದಿಯವರ (Narendra Modi) ಅದ್ಭುತ ಕಾರ್ಯದಿಂದ ಅವರನ್ನ ಸಂಪೂರ್ಣ ಬೆಂಬಲಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಅವತ್ತು ಸುಮಲತಾ ಅವರನ್ನು ಗೆಲ್ಲಿಸಲು ಹೋರಾಟ ಮಾಡಿದವರ ಕಥೆ ಏನು? ನಾನು, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡೀಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಬಿ.ಚಂದ್ರಶೇಖರ್ ಎಲ್ಲರೂ ಅವರ ಜೊತೆ ನಿಂತಿದ್ದೆವು. ಇವತ್ತು ಅವರು ಯಾರಿಗೆ ನ್ಯಾಯ ಕೊಡುತ್ತಿದ್ದಾರೆ? ಈ ಬಗ್ಗೆ ಈಗಲೇ ಉತ್ತರ ಕೊಡಿ. ಅಷ್ಟೇ ಅಲ್ಲದೇ ಅವರ ಬಾಯಲ್ಲಿ ಇಂದಿನಿಂದ ಸ್ವಾಭಿಮಾನ ಅನ್ನೋ ಪದ ಬರಬಾರದು ಎಂದು ಗುಡುಗಿದರು. ಇದನ್ನೂ ಓದಿ: ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

ನಮ್ಮ ಜಿಲ್ಲೆಯ ಸ್ವಾಭಿಮಾನವನ್ನು ನೀವು ಅಡವಿಡಲು ಹೋಗಬೇಡಿ. ನಿಮಗೆ ಸ್ವಾಭಿಮಾನ ಅಂತೇಳಲು ಯಾವುದೇ ಹಕ್ಕಿಲ್ಲ, ಇದಕ್ಕೆಲ್ಲ ಈಗಲೇ ಉತ್ತರಕೊಡಿ. ನೀವು ಯಾವ ರೀತಿ ಕತ್ತು ಹಿಸುಕುತ್ತಿದ್ದೀರಿ, ಕೊಲೆಗಡುಕರು ಅನ್ನೋದನ್ನ ಹೇಳಿ. ನೀವು ಬೆನ್ನಿಗೆ ಚೂರಿ ಹಾಕೋರು ಅನ್ನೋದನ್ನ ಹೇಳಿ ಸಚ್ಚಿದಾನಂದನನ್ನ ಬಿಟ್ಟುಕೊಡಲು ನಿಮಗೆ ಆಗಲ್ಲ. ಹಾಗಿದ್ರೆ ರಮೇಶ್ ಬಂಡೀಸಿದ್ದೇಗೌಡ, ಬೆಂಬಲವಾಗಿ ನಿಂತ ರೈತ ಸಂಘಕ್ಕೆ ಏನು ನ್ಯಾಯ ಕೊಡುತ್ತೀರಿ. ನಮ್ಮಣ್ಣನ ಮರ್ಯಾದೆ ಕಳೆಯಲು ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ಐಟಿ ದಾಳಿ -ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆಗಳು ಪತ್ತೆ

Share This Article
Leave a Comment

Leave a Reply

Your email address will not be published. Required fields are marked *