ಕಾಂಗ್ರೆಸ್ ನಾಯಕ ಹರಿಪ್ರಸಾದ್‌ಗೆ ನೋಟಿಸ್‌ ಕೊಡೋದಿಲ್ಲ: ಜಿ.ಪರಮೇಶ್ವರ್

Public TV
1 Min Read

ಬೆಂಗಳೂರು: ರಾಮಮಂದಿರ ಉದ್ಘಾಟನೆ ವೇಳೆ ಬಿಜೆಪಿ ಗೋಧ್ರಾ ಹತ್ಯಾಕಾಂಡದ ರೀತಿ ಮಾಡಲು ಪ್ಲ್ಯಾನ್ ಮಾಡಿದೆ ಎಂಬ ಕಾಂಗ್ರೆಸ್ ನಾಯಕ ಹರಿಪ್ರಸಾದ್‌ (B.K.Hariprasad) ವಿವಾದದ ಹೇಳಿಕೆಗೆ ಯಾವುದೇ ನೋಟಿಸ್ ಕೊಡಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ‌ಮಾತನಾಡಿದ ಅವರು, ಹರಿಪ್ರಸಾದ್‌ ಹೇಳಿಕೆ ಬಗ್ಗೆ ಗೃಹ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಅಂತಹ ಮಾಹಿತಿ ಬಂದರೆ, ಅದನ್ನ ಹ್ಯಾಂಡಲ್ ಮಾಡೋಕೆ ನಮ್ಮ ಇಲಾಖೆ ಸಮರ್ಥವಾಗಿ ಇದೆ. ಅಂತಹ ಘಟನೆಗಳು ಆಗೋಕೆ ನಾವು ಬಿಡೊಲ್ಲ. ಸಂದರ್ಭ ಬಂದರೆ ಹರಿಪ್ರಸಾದ್‌ ಅವರನ್ನ ಕರೆದು ಬೇಕಿದ್ರೆ ಕೇಳೋಣ ಎಂದರು. ಇದನ್ನೂ ಓದಿ: ಭಯ ಹುಟ್ಟಿಸುವವರು ಭಯೋತ್ಪಾದಕರು: ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀ ಕೆಂಡ

ನಮ್ಮ ಇಲಾಖೆಗೆ ಇದನ್ನ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ಗೊತ್ತಿದೆ. ಹರಿಪ್ರಸಾದ್‌ ಹಿರಿಯ ನಾಯಕರು. ಅವರು ಹೇಳಬೇಕಿದ್ರೆ ಅವರ ಬಳಿ ಮಾಹಿತಿ ಇರಬೇಕು. ಹರಿಪ್ರಸಾದ್‌ಗೆ ನೋಟಿಸ್ ಕೊಟ್ಟು ಕರೆಯೋ ಅವಶ್ಯಕತೆ ‌ಇಲ್ಲ.‌ ಹೇಳಿಕೆ ಕೊಟ್ಟವರಿಗೆಲ್ಲಾ ನೋಟಿಸ್ ಕೊಡೋಕೆ ಹೋದ್ರೆ ಎಷ್ಟು ಜನರಿಗೆ ನೋಟಿಸ್‌ ಕೊಡಬೇಕಾಗುತ್ತೆ ಎಂದು ತಿಳಿಸಿದರು.

ಸೂಕ್ಷ್ಮ ವಿಚಾರ ಆಗಿರೋದ್ರಿಂದ ನಾವು ಎಲ್ಲಾ ಗ್ರಹಿಸುತ್ತೇವೆ. ನಮ್ಮ ಇಂಟಲಿಜೆನ್ಸ್ ಸೋರ್ಸ್‌ ಅವರು ನೋಡ್ತಾರೆ. ಒಂದು ವೇಳೆ ಅಂತಹ ಮಾಹಿತಿ ಇದ್ದರೆ ಅದಕ್ಕೆ ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನಾನೂ ಕರಸೇವಕ, ನನ್ನನ್ನೂ ಬಂಧಿಸಿ – ಅಭಿಯಾನ ಆರಂಭಿಸಿದ್ದ ಸುನಿಲ್‌ ಕುಮಾರ್‌ ವಶಕ್ಕೆ

Share This Article