ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಕಾಂಗ್ರೆಸ್‌ ನಾಯಕಿ ಅರೆಸ್ಟ್

1 Min Read

ದಾವಣಗೆರೆ: ಇಲ್ಲಿನ ಸಾಮಾಜಿಕ ಕಾರ್ಯಕರ್ತ, ಜೆಡಿಎಸ್ ಮುಖಂಡ ಟಿ ಅಸ್ಗರ್ ಕೊಲೆ‌ ಯತ್ನ ಪ್ರಕರಣದ ಆರೋಪಿ ಕಾಂಗ್ರೆಸ್‌ ಮುಖಂಡ ಖಾಲೀದ್ ಫೈಲ್ವಾನ್ ತಪ್ಪಿಸಿಕೊಳ್ಳಲು ಹಣದ ಸಹಾಯ ಹಾಗೂ ಆಶ್ರಯ ನೀಡಿದ್ದ ಆರೋಪದ ಮೇಲೆ ‌ಕಾಂಗ್ರೆಸ್‌ ಮುಖಂಡೆ ಸವಿತಾ ಮಲ್ಲೇಶ್ ನಾಯ್ಕ್ ನನ್ನ ದಾವಣಗೆರೆ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ.

ಚಾಕು ಇರಿತಕ್ಕೆ ಒಳಗಾದ ಟಿ. ಅಸ್ಗರ್ ಹಾಗೂ ‌ಕಾಂಗ್ರೆಸ್‌ ಮುಖಂಡ ಖಾಲೀದ್ ಫೈಲ್ವಾನ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆಯುತ್ತಿತ್ತು, ಕಳೆದ ನವಂಬರ್ 10 ರಂದು ಭಾಷಾ ನಗರದ 5 ನೇ ಕ್ರಾಸ್ ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಟಿ ಅಸ್ಗರ್ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್‌ ಬರುವಾಗ ಅಸ್ಗರ್‌ನನ್ನ ಅಡ್ಡಹಾಕಿದ ‌ಕಾಂಗ್ರೆಸ್‌ ಮುಖಂಡ ಹಾಗೂ ರೌಡಿ ಶೀಟರ್ ಖಾಲೀದ್ ಫೈಲ್ವಾನ್ ಹಲ್ಲೆ ನಡೆಸಿ ಚಾಕು ಇರಿದಿದ್ದ.

ಕೊಲೆ ಯತ್ನ ನಡೆಸಿ ತಲೆಮರೆಸಿಕೊಂಡಿದ್ದ.‌ ಖಾಲೀದ್ ಫೈಲ್ವಾನ್ ಗಾಗಿ ಅಜಾದ್ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈವೇಳೆ ಕೊಲೆ ಅರೋಪಿಗೆ ಆಶ್ರಯ ಹಾಗೂ ಹಣದ ಸಹಾಯ ಮಾಡಿದ್ದಲ್ಲದೆ. ಕಳೆದ ಒಂದು ವಾರದಿಂದ ಬೆಂಗಳೂರು, ಗೋವಾ ಹಾಗೂ ದೆಹಲಿ ಸೇರಿದಂತೆ ಹಲವೆಡೆ ಆರೋಪಿ ಖಾಲೀದ್ ಹಾಗೂ ಸವಿತಾಬಾಯಿ ಸುತ್ತಾಡಿದ್ದಾರೆ.

ಸವಿತಾ ಮಲ್ಲೇಶ್ ನಾಯ್ಕ್ ಮಾಯಕೊಂಡ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೇಟ್ ಸಿಗದ ಕಾರಣ ಪಕ್ಷೇತರ ಸ್ಪರ್ಧಿಸಿ ಪರಾಜಿತಗೊಂಡು ಮತ್ತೆ ಕಾಂಗ್ರೇಸ್ ಸೇರಿದ್ದ‌ರು.‌ ಆಲ್ಲದೇ ಕೊಲೆ ಯತ್ನ ಆರೋಪಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು, ಪೋಲೀಸರ ತನಿಖೆ ವೇಳೆ ಬಯಲಾಗಿದೆ. ಈ ಹಿನ್ನೆಲೆ ʻಕೈʼ ಮುಖಂಡೆ ಸವಿತಾ ಮಲ್ಲೇಶ್ ನಾಯ್ಕ್‌ ನನ್ನ ಬೆಂಗಳೂರಿನಿಂದ ಅರೆಸ್ಟ್ ಮಾಡಿದ ಪೊಲೀಸರು ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article