ಗಾಂಧಿ ಹತ್ಯೆಯನ್ನು ಸಂಭ್ರಮಿಸುವ RSS ದೇಶಪ್ರೇಮಿ ಸಂಘಟನೆಯಲ್ಲ: ಕಾಂಗ್ರೆಸ್

Public TV
1 Min Read

ಬೆಂಗಳೂರು: ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆ ಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್‌ಎಸ್‌ಎಸ್ ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂದು ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ಟ್ವಿಟ್ಟರ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ?
ಈ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜೀ ಮಹಾತ್ಮ ಗಾಂಧಿಯವರು ಸತ್ತ ದಿನ ಸಿಹಿ ಹಂಚಿದ ಗುಳ್ಳೆನರಿ ಆರ್‌ಎಸ್‌ಎಸ್ ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು? ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ? ನಾವು ಮೂರು ಜನ ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ. ನಾವು ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ ಆರ್‌ಎಸ್‌ಎಸ್ ಸಂಘಟನೆಯಲ್ಲೇ ಬೆಳೆದೆವು ಎಂದು ಹೇಳಬಹುದು. ಇದು ಗೋಪಾಲ ಗೋಡ್ಸೆಯ ಮಾತುಗಳು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್

ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಯಾಳಿಸುತ್ತಾ ಬ್ರಿಟೀಷರ ಸೈನ್ಯ ಸೇರಲು ಆರ್‌ಎಸ್‌ಎಸ್ ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್‌ಎಸ್‌ಎಸ್ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನೇನು?

ಆರ್‌ಎಸ್‌ಎಸ್ ಈ ದೇಶಕ್ಕೆ ದ್ರೋಹ ಬಗೆದ ಸಂಘಟನೆ ಎಂಬುದಕ್ಕೆ ಒಂದಷ್ಟು ನಿದರ್ಶನಗಳು 1929ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರ್‌ಲಾಲ್ ನೆಹರುರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆಕೊಡುತ್ತಾರೆ ಇದನ್ನು ನಿರಾಕರಿಸಿದ ಆರ್‌ಎಸ್‌ಎಸ್ ತನ್ನ ಸಂಘದ ಕಛೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ. ಇದನ್ನೂ ಓದಿ: ‘ಕೆಜಿಎಫ್ 2’ ರಾಕಿಭಾಯ್ ಪ್ರೇರಣೆಯಿಂದ ಆಸ್ಪತ್ರೆ ಸೇರಿದ 15 ವರ್ಷದ ಬಾಲಕ

Share This Article
Leave a Comment

Leave a Reply

Your email address will not be published. Required fields are marked *