ಇಂಡಿಯಾ ಒಕ್ಕೂಟ ವೇಗ ಕಳೆದುಕೊಳ್ಳಲು ಕಾಂಗ್ರೆಸ್ ಕಾರಣ – ದೂಷಣೆ ಬೆನ್ನಲ್ಲೇ ನಿತೀಶ್ ಕುಮಾರ್ ಜೊತೆ ಖರ್ಗೆ ಮಾತುಕತೆ

Public TV
1 Min Read

ನವದೆಹಲಿ: ಇಂಡಿಯಾ ಒಕ್ಕೂಟದ (INDIA Alliance) ಆರಂಭದಲ್ಲಿದ್ದ ವೇಗವನ್ನು ಕಳೆದುಕೊಳ್ಳಲು ಕಾಂಗ್ರೆಸ್ (Congress) ಕಾರಣ ಎಂದು ದೂಷಿಸುತ್ತಿದ್ದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ವಿರುದ್ಧ ನಿತೀಶ್ ಕುಮಾರ್ ಹರಿಹಾಯುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಅಧ್ಯಕ್ಷರು ದೂರವಾಣಿ ಮೂಲಕ ಮಾತುಕತೆ ನಡೆಸಿ ಕಾಂಗ್ರೆಸ್ ಐದು ರಾಜ್ಯಗಳ ಚುನಾವಣೆ ಮೇಲೆ ಹೆಚ್ಚು ಕೇಂದ್ರೀಕರಿಸಿದೆ. ಚುನಾವಣೆ ಅಂತ್ಯವಾಗುತ್ತಿದ್ದಂತೆ ಮತ್ತೆ ಇಂಡಿಯಾ ಒಕ್ಕೂಟದ ಚಟುವಟಿಕೆಗಳನ್ನು ಹೆಚ್ಚಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಮಹದೇವನ ಹೆಸರನ್ನೂ ಬಿಟ್ಟಿಲ್ಲ- ಮೋದಿ ವಾಗ್ದಾಳಿ

ನವೆಂಬರ್ 2ರಂದು ನಿತೀಶ್ ಕುಮಾರ್ ಅವರು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತಿ ಹೊಂದಿದೆ. ಇದರಿಂದ ಇಂಡಿಯಾ ಒಕ್ಕೂಟದ ಚಟುವಟಿಕೆಗಳು ಮಂದವಾಗಿದೆ ಎಂದು ದೂಷಿಸಿದ್ದರು. ಒಕ್ಕೂಟದಲ್ಲಿ ನಾವೆಲ್ಲರೂ ಕಾಂಗ್ರೆಸ್‌ಗೆ ಪ್ರಮುಖ ಪಾತ್ರವನ್ನು ನೀಡಲು ಒಪ್ಪಿಕೊಂಡಿದ್ದೇವೆ. ಹೀಗಾಗಿ ಕಾಂಗ್ರೆಸ್ ಜೊತೆಗೆ ಚರ್ಚಿಸಿ ಮುಂದಿನ ಸಭೆಯ ದಿನಾಂಕ ನಿಗದಿ ಮಾಡಲಾಗುವುದು ಎಂದಿದ್ದರು. ಇದನ್ನೂ ಓದಿ: ಗರೀಬ್ ಕಲ್ಯಾಣ್ ಅನ್ನ ಯೋಜನೆ ಮುಂದಿನ ಐದು ವರ್ಷಕ್ಕೆ ವಿಸ್ತರಣೆ: ಮೋದಿ ಘೋಷಣೆ

ಜೂನ್‌ನಲ್ಲಿ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಮೊದಲ ಸಭೆಯನ್ನು ಆಯೋಜಿಸುವಲ್ಲಿ ಜೆಡಿಯು ನಾಯಕ ಪ್ರಮುಖ ಪಾತ್ರವಹಿಸಿದ್ದಲ್ಲದೇ ಇಂಡಿಯಾ ಒಕ್ಕೂಟದ ರಚನೆಗೆ ಮುಂದಾಳತ್ವ ವಹಿಸಿದ್ದರು. ಜುಲೈನಲ್ಲಿ ಬೆಂಗಳೂರಿನಲ್ಲಿ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಸಲಾಯಿತು. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಮೂರು ಬಾರಿ ಕಂಪನ- ದೆಹಲಿಯಲ್ಲಿ ನಿರಂತರ ಭೂಕಂಪನಕ್ಕೆ ಕಾರಣವೇನು?

Share This Article