ರಾಜ್ಯದ ಆಂತರಿಕ ಕಚ್ಚಾಟ ಕಾಂಗ್ರೆಸ್‌ ಹೈಕಮಾಂಡ್ ಸರಿಪಡಿಸಲಿ: ಸತೀಶ್‌ ಜಾರಕಿಹೊಳಿ

1 Min Read

ಬೆಂಗಳೂರು: ರಾಜ್ಯದ ಆಂತರಿಕ ಕಚ್ಚಾಟ ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ (Congress High Command) ಮಾಡಬೇಕು ಇಲ್ಲದಿದ್ದರೆ ಇದು ಪರಿಣಾಮ ಬೀರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬರುವ ಚುನಾವಣೆಗಳಲ್ಲಿ ಸರ್ಕಾರದ ಆಂತರಿಕ ಗೊಂದಲ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಕಷ್ಟವಾಗಲಿದೆ. ರಾಜಣ್ಣ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಆಗಿರೋದು ಆಗಿ ಹೋಗಿದೆ, ಮುಂದೇನು ಅನ್ನೋದು ನೋಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ದೆಹಲಿಗೆ ತೆರಳಲಿದ್ದಾರೆ ಸಿಎಂ ಸಿದ್ದರಾಮಯ್ಯ

ಈಗ 2028 ಕ್ಕೆ ಚುನಾವಣೆ ಬರೋದು. ಬಿಎಲ್‌ಎಗಳು ಏನೇನು ಹೊಸ ಪ್ರಯೋಗ ಮಾಡ್ತಾರೆ. ಅದರ ಬಗ್ಗೆ ನಾವು ಮುನ್ನೆಚ್ಚರಿಕೆ ಇರಬೇಕು. ನಮ್ಮ ಅಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರಲ್ಲ. ನೀವು ನೀವೇ ಬಗೆಹರಿಸಿಕೊಳ್ಳಿ ಅಂತ. ಹಾಗಾಗಿ, ಅವರಿಬ್ಬರೇ ಬಗೆಹರಿಸಿಕೊಳ್ಳಬೇಕು ಎಂದರು.

ಯಾರಿದ್ದಾರೆ ಅವರೇ ಬಗೆಹರಿಸಿಕೊಳ್ಳಬೇಕು. ಕ್ಯಾಪ್ಟನ್ ವೈಸ್ ಕ್ಯಾಪ್ಟನ್ ಇದಾರಲ್ಲ ಅವರೇ ಬಗೆಹರಿಸಿಕೊಳ್ಳಬೇಕು. ಇಬ್ಬರೇ ಮಾತನಾಡಬೇಕು. ಮೂರನೆಯವರಿಗೆ ಅವಕಾಶ ಇರಲ್ಲ. ದಿಲ್ಲಿ ಒಳಗೆ ಏನು ಆಗಿಲ್ಲ ಅಂದಿದ್ದಾರೆ. ಬೆಳಗಾವಿಯಲ್ಲಿ ಡಿನ್ನರ್ ಮೀಟಿಂಗ್ ಎಲ್ಲರೂ ಮಾಡಿದ್ರಲ್ಲ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ 30 ಸಾವಿರ ಉದ್ಯೋಗ – ರಾಹುಲ್‌ ಗಾಂಧಿ, ಅಶ್ವಿನಿ ವೈಷ್ಣವ್‌ ಮಧ್ಯೆ ಕ್ರೆಡಿಟ್‌ ವಾರ್‌

Share This Article