ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

Public TV
1 Min Read

ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮತಗಳವು ಆರೋಪವನ್ನ ಸಂಸದ ಪಿಸಿ ಮೋಹನ್ (PC Mohan) ತಳ್ಳಿಹಾಕಿದ್ದಾರೆ. ಮಹಾದೇವಪುರ (Mahadevapura) ಕ್ಷೇತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಸರ್ವಜ್ಞ ನಗರ (Sarvagna Nagar) ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಪಿಸಿ ಮೋಹನ್ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್‌ನಲ್ಲಿ ಮತದಾರರ ಪರಿಷ್ಕರಣೆ ಆಗಬಾರದು ಅಂತಾರೆ. ಇಲ್ಲಿ ಅಕ್ರಮ ಮತಗಳಿದೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿಯ ದ್ವಂದ್ವ ರೀತಿ ಅಂದರು. 2009ರಿಂದ ನಿರಂತರವಾಗಿ ಮತಗಳು ಏರಿಕೆಯಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಇದೆ. ಮಹಾದೇವಪುರ ಕ್ಷೇತ್ರದ ಮೇಲೆ ರಾಹುಲ್ ಗಾಂಧಿ ಅವರಿಗೆ ಅನುಮಾನ ಬಂದಿದೆ. ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ಗೆ (Congress) ಹೆಚ್ಚು ಮತ ಬಂದಿದೆ. ಅಲ್ಲಿ ಮತಗಳ ಪ್ರಮಾಣವೂ ಹೆಚ್ಚಾಗಿದೆ. ಮತ ಯಾಕೆ ಹೆಚ್ಚಾಗಿದೆ ಎನ್ನುವ ಅನುಮಾನಕ್ಕೆ ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಆಗ್ರಹಿಸಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

ಇನ್ನು, 2024ರಲ್ಲಿ ಯಾರ ಸರ್ಕಾರ ಇತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದೊಂದಿಗೆ ಮತದಾರರ ಪಟ್ಟಿ ಮಾಡಿಕೊಡಲಾಗುತ್ತದೆ. ಹಾಗಿದ್ರೆ ಅವರದ್ದೇ ತಪ್ಪು. ಕಾಂಗ್ರೆಸ್‌ಗೆ ಒಂದು ಸ್ಥಾನದಿಂದ ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು ಅಂತಾ ಪ್ರಶ್ನಿಸಿದರು. ಇದನ್ನೂ ಓದಿ: ಅದಾನಿ ದುಡ್ಡನ್ನ ಮೋದಿ, ಬಿಜೆಪಿಯವರು ಹಂಚಿಕೊಳ್ತಿದ್ದಾರೆ: ಸಂತೋಷ್ ಲಾಡ್

ಐಟಿಗಾಗಿ ಬೇರೆ ರಾಜ್ಯದಿಂದ ಬಹಳ ಜನರು ಬಂದಿದ್ದಾರೆ. ಐಡಿಗೆ ಆಧಾರ್ ಲಿಂಕ್ ಮಾಡಬೇಕು. ಅದನ್ನು ಮಾಡಲು ಅವರು ವಿರೋಧಿಸುತ್ತಿದ್ದಾರೆ. ಇನ್ನು ಐದು ಗಂಟೆ ಮೇಲೆ ಯಾಕೆ ಮತ ಪ್ರಮಾಣ ಹೆಚ್ಚುತ್ತಿದೆ ಗೊತ್ತಿಲ್ಲ. ಸಿಸಿಟಿವಿ ದೃಶ್ಯ ಕೇಳಲಿ, ಆಯೋಗ (Election Commission) ಕೊಡದಿದ್ದರೆ ನಾನು ಏನು ಮಾಡಲು ಸಾಧ್ಯ ಎಂದು ತಿಳಿಸಿದರು. ಇದನ್ನೂ ಓದಿ: ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

Share This Article