ರಾಜ್ಯಪಾಲರ ಘನತೆಗೆ ಕಾಂಗ್ರೆಸ್ ಅಗೌರವ ತೋರಿದೆ, ಸದಾಕಾಲ ಕೇಂದ್ರದ ಜೊತೆ ಸಂಘರ್ಷ ಸರಿಯಲ್ಲ: ನಿಖಿಲ್

1 Min Read

ರಾಮನಗರ: ರಾಜ್ಯಪಾಲರ (Governer) ಸ್ಥಾನಕ್ಕೆ ಒಂದು ಗೌರವ ಇದೆ. ಅವರು ಏನನ್ನ ಓದಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಅವರ ಘನತೆಯನ್ನ ಕಾಂಗ್ರೆಸ್‌ನವರು (Congress) ಹಾಳು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಯುವಕ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರನ್ನ ಕಾಂಗ್ರೆಸ್ ಶಾಸಕರು ಅಡ್ಡಗಟ್ಟಿ ಧಿಕ್ಕಾರ ಕೂಗಿದ ವಿಚಾರ ಕುರಿತು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ, ಕೇಂದ್ರ ಸಂಘರ್ಷ ಮಾಡಿಕೊಂಡು ಹೋದ್ರೆ ರಾಜ್ಯದ ಜನತೆಯೇ ಬಡವಾಗುತ್ತಾರೆ. ತುಮಕೂರಿನಲ್ಲಿ ಸ್ಟೇಡಿಯಂ ಹೆಸರು ಬದಲಾವಣೆ ಆಯ್ತು. ಮಹಾತ್ಮ ಗಾಂಧಿ ಹೆಸರು ಬದಲಾವಣೆ ಮಾಡಿರೋದು ನಿಮ್ಮ ನಾಯಕರೇ. ಅದರ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಕಾಂಗ್ರೆಸ್‌ನವರು ಯಾಕೆ ಈ ವಿಚಾರದಲ್ಲಿ ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

ಇನ್ನೂ ಮುಂದಿನ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುವ ವಿಚಾರ ಕುರಿತು ಮಾತನಾಡಿ, ಸ್ವಾಭಾವಿಕವಾಗಿ ಜನ ಪ್ರೀತಿಯಿಂದ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಮುಖಂಡರಲ್ಲೇ ಓವರ್ ಕಾನ್ಫಿಡೆನ್ಸ್ ಇತ್ತು. ಅದನ್ನ ಅವರೇ ಒಪ್ಪಿಕೊಳ್ಳುತ್ತಾರೆ. ಆದರೂ ಸ್ವಲ್ಪ ಎಡವಿದ್ರು. ಎಲ್ಲವನ್ನೂ ಸರಿಪಡಿಸಿ ಮೊದಲು ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದರು. ಇದನ್ನೂ ಓದಿ: ಅಸ್ತಿತ್ವಕ್ಕೆ ಬಂತು ಟ್ರಂಪ್‌ ಕನಸಿನ ಬೋರ್ಡ್‌ ಆಫ್‌ ಪೀಸ್‌ – ಪಾಕಿಸ್ತಾನವೂ ಸದಸ್ಯ ದೇಶ

ಇನ್ನೂ ರಾಜ್ಯ ರಾಜಕಾರಣಕ್ಕೆ ಹೆಚ್‌ಡಿಕೆ ಎಂಟ್ರಿ ಕುರಿತು ಮಾತನಾಡಿ ಈ ಬಗ್ಗೆ ಪ್ರಶ್ನೆಯೇ ದ್ವಂದ್ವ, ಅವರು ರಾಜ್ಯಕ್ಕೆ ಬರ್ತಾರಾ, ಕ್ಷೇತ್ರಕ್ಕೆ ಬರ್ತಾರ ಅಂತ ಚರ್ಚೆ ಮಾಡುತ್ತಿದ್ದೀರಿ. ಮೊದಲು ರಾಜ್ಯಕ್ಕೆ ಬರ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡುಕೊಳ್ಳೋಣ. ಬಳಿಕ ಯಾವ ಕ್ಷೇತ್ರಕ್ಕೆ ಬರ್ತಾರೆ ಅನ್ನೋದು ತೀರ್ಮಾನ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 38 ಕೋಟಿ ಮೌಲ್ಯದ ಕೊಕೇನ್ ಸೀಜ್

Share This Article