ಸರ್ಕಾರ ರಾಜಭವನದ ಮಧ್ಯೆ ‘ಪತ್ರ’ ಸಮರ – ರಾಜ್ಯಪಾಲರು ಬರೆದ 35 ಪತ್ರಗಳಿಗೆ ಬಂದಿಲ್ಲ ಉತ್ತರ

Public TV
1 Min Read

ಬೆಂಗಳೂರು: ಸರ್ಕಾರ ವರ್ಸಸ್ ರಾಜಭವನದ ಮಧ್ಯೆ ಪತ್ರ ಸಮರ ನಿಲ್ಲುವ ಸೂಚನೆ ಸದ್ಯಕ್ಕೆ ಕಾಣುತ್ತಿಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಮಾಹಿತಿ ಕೇಳಿ ಒಟ್ಟು 35 ಪತ್ರಗಳನ್ನು ಬರೆದಿದ್ದಾರೆ.

ಪದೇ ಪದೇ ರಾಜ್ಯಪಾಲರು ಮಾಹಿತಿ ಕೇಳುವುದು ಸರಿಯಿಲ್ಲ, ಅಧಿಕಾರಿಗಳು ನೇರವಾಗಿ ಉತ್ತರಿಸದಂತೆ ಈ ಹಿಂದೆಯೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಿದೆ. ಆದರೆ, ಇದನ್ನು ಪರಿಗಣಿಸಲು ಒಪ್ಪದ ರಾಜ್ಯಪಾಲರು ಸರ್ಕಾರಕ್ಕೆ ಮಾಹಿತಿ ಕೇಳಿ ಒಟ್ಟು 35 ಪತ್ರಗಳನ್ನು ಬರೆದಿದ್ದಾರೆ. ಆದ್ರೆ ರಾಜ್ಯಪಾಲರ ಯಾವುದೇ ಪತ್ರಗಳಿಗೂ ಸರ್ಕಾರ ತೆಲೆಕೆಡಿಸಿಕೊಂಡಿಲ್ಲ. ಇದನ್ನೂ ಓದಿ: ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಅಪರಾಧಿ – ಶೋಭಾ ಕರಂದ್ಲಾಜೆ

ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಆದರೂ, ಪಟ್ಟುಬಿಡದ ರಾಜ್ಯಪಾಲರು ನೆನಪೋಲೆಗಳನ್ನು ಮೇಲಿಂದ ಮೇಲೆ ಸರ್ಕಾರಕ್ಕೆ ರವಾನೆ ಮಾಡುತ್ತಿದ್ದಾರೆ. ಇತ್ತ, ನಮ್ಮನ್ನ ಕೇಳದೆ ಮಾಹಿತಿ ಕೊಡುವ ಹಾಗಿಲ್ಲ ಎಂದು ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

ಹೀಗಾಗಿ, ರಾಜ್ಯಪಾಲರ ಪತ್ರಗಳಿಗೆ ಉತ್ತರಿಸಲಾಗದೇ, ಉನ್ನತ ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದ್ದಾರೆ. ಅಂದ ಹಾಗೇ, ಇಂದಿನ ಕ್ಯಾಬಿನೆಟ್‌ನಲ್ಲಿ ರಾಜ್ಯಪಾಲರ ಪತ್ರಕ್ಕೆ ಉತ್ತರ ಬಂದಿಲ್ಲ ಎಂಬ ರಾಜಭವನದ ರಿಮೈಂಡ್ ಕಾಪಿ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ. ಇದು ಮುಂದೆ ಎಲ್ಲಿಗೆ ಮುಟ್ಟುತ್ತೋ ಎಂಬ ಆತಂಕ, ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಬಿಜೆಪಿಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಒಪ್ಪಂದ ಆಗಿಲ್ಲ: ಹೆಚ್‌ಡಿಕೆ

Share This Article