ಬೆಂಗಳೂರು: ವಕ್ಫ್ ವಿರೋಧಿ ಹೋರಾಟ ಬಳಿಕ ಅಕ್ರಮ ಬಾಂಗ್ಲಾ ನಿವಾಸಿಗಳ (Illegal Bangladeshi Residents) ವಿರುದ್ಧ ಹೋರಾಟಕ್ಕೆ ಬಿಜೆಪಿ (BJP) ಭಿನ್ನಮತೀಯ ನಾಯಕರು ಮುಂದಾಗಿದ್ದಾರೆ.
ಮಹಾದೇವಪುರ (Mahadevapura) ವಿಧಾನಸಭೆ ಕ್ಷೇತ್ರದಲ್ಲಿಂದು ಬಿಜೆಪಿ ರೆಬೆಲ್‌ಗಳ ಟೀಮ್ ಅಕ್ರಮ ವಲಸಿಗರ ವಿರುದ್ಧ ಬೃಹತ್ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕಿ ಮಂಜುಳಾ ಲಿಂಬಾವಳಿ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಬಿ ವಿ ನಾಯಕ್, ಪ್ರತಾಪ್ ಸಿಂಹ, ಶಾಸಕ ಬಿ ಪಿ ಹರೀಶ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಸಂಬಂಧ ರಾಜ್ಯ ಸರ್ಕಾರ (Karnataka Government) ನಿರ್ಲಕ್ಷ್ಯ ವಹಿಸಿದೆ. ಅಪರಾಧ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಕ್ರಮ ವಲಸಿಗರು ಭಾಗವಹಿಸಿ ದೇಶದ ಭದ್ರತೆಗೆ ಸವಾಲಾಗಿದ್ದಾರೆ. ಗುಜರಾತ್ ಮಾದರಿಯಲ್ಲಿ ರಾಜ್ಯ ಸರ್ಕಾರವು ಅಕ್ರಮ ವಲಸಿಗರ ಗಡೀಪಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್ ಸಿಂಹ
ಇನ್ನು ಇದೇವೇಳೆ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಕುರಿತು ಕುರು ಸಾಕ್ಷ್ಯಚಿತ್ರ ಪ್ರದರ್ಶನ ಪ್ರಸಾರ ಮಾಡಿದ್ದಲ್ಲದೇ ಕಿರು ಪುಸ್ತಕ ಬಿಡುಗಡೆಗೊಳಿಸಲಾಯ್ತು. ಅಲ್ರಮ ವಲಸಿಗರ ವಿರುದ್ಧದ ಈ ಜನಜಾಗೃತಿ ಅಭಿಯಾಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಬಿಜೆಪಿ ಭಿನ್ನ ನಾಯಕರು ನಿರ್ಧಾರ ಪ್ರಕಟಿಸಿದರು.
ಇದೇವೇಳೆ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ (Aravind Limbavali), ಅಕ್ರಮ ವಲಸಿಗರ ವಿಚಾರದಲ್ಲಿ ಗುಜರಾತ್ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎದೆಗಾರಿಕೆ ತೋರಬೇಕು ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹಿಸಿದರು.
ಅಕ್ರಮ ವಲಸಿಗರ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡಬಾರದು. ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಫ್ಟ್ ಆಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ ಎರಡು ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡೀಪಾರು ಮಾಡಲಾಯ್ತು. ರಾಜ್ಯ ಸರ್ಕಾರವೂ ಆ ಕೆಲಸ ಮಾಡಲಿ. ಅಕ್ರಮ ವಲಸಿಗರಿಗೆ ಯಾವುದೋ ಒತ್ತಡದ ಕಾರಣಕ್ಕೆ ಅವಕಾಶ ಕೊಟ್ರೆ ಕರ್ನಾಟಕ ಪಶ್ಚಿಮ ಬಂಗಾಳ ಆಗುತ್ತೆ. ಯಾರ್ಯಾರು ಅಕ್ರಮವಾಗಿ ಬಂದಿದ್ದಾರೋ ಅವರನ್ನು ವಾಪಸ್ ಕಳಿಸಿ ಎಂದು ಒತ್ತಾಯಿಸಿದರು.
ಅಕ್ರಮ ವಲಸಿಗರಿಗೆ ಫೇಕ್ ಆಧಾರ್ ಕಾರ್ಡ್ ಮಾಡಿಕೊಡುವ ಜಾಲ ಬೆಂಗಳೂರಿನಲ್ಲಿ ಇದೆ. ಅದಕ್ಕಾಗಿ ಏಜೆನ್ಸಿಗಳೂ ಇವೆ. ಪೊಲೀಸರು ವಲಸಿಗರ ಮೊಬೈಲ್ ಪರಿಶೀಲಿಸಿದ್ರೆ ಅವರ ಜಾತಕವೇ ಗೊತ್ತಾಗುತ್ತೆ. ಈ ಕೆಲಸ ಸರ್ಕಾರ, ಪೊಲೀಸ್ ಬದ್ಧತೆಯಿಂದ ಮಾಡಬೇಕು. ಅಕ್ರಮ ವಲಸಿಗರನ್ನು ಕೆಲಸಕ್ಕೆ ಯಾರೂ ಸೇರಿಸಿಕೊಳ್ಳದಂತೆ ಕರೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್, ಫ್ರಿಡ್ಜ್, ವಾಷಿಂಗ್ ಮೆಷಿನ್ ಸಾಗಿಸಬಹುದು! –ಯಾವುದಕ್ಕೆ ಎಷ್ಟು ದರ?
ಇನ್ನು ಇದೇವೇಳೆ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ತಮ್ಮ ಭಾಷಣ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಗರಂ ಆದ ಲಿಂಬಾವಳಿ,ಇಲ್ಲಿ ಬಂದು ರೆಕಾರ್ಡ್ ಮಾಡೋದೇಕೆ? ನಾವು ದೇಶಭಕ್ತರು. ಅಕ್ರಮ ವಲಸಿಗರನ್ನು ಹೋಗಿ ರೆಕಾರ್ಡ್ ಮಾಡಲು ತಾಕತ್ ಇದೆಯಾ ಕಿಡಿಕಾರಿದರು.
ಇದು ಬಿಜೆಪಿ ಅಸಮಧಾನಿತರ ಹೋರಾಟ ಅಂತ ಮಾಧ್ಯಮಗಳು ಬರೆಯುತ್ತವೆ. ನಾವು ಅಸಮಾಧಾನಿತ ಹೋರಾಟವಲ್ಲ. ನಮ್ಮದು ದೇಶ ಉಳಿಸುವ ಹೋರಾಟ ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.