– ಕೊಲೆಗಾರರು ಬೆಂಗಳೂರಿನಲ್ಲಿ ಆರಾಮಾಗಿ ಇದ್ದಾರೆ
ಬೆಂಗಳೂರು: ಬಳ್ಳಾರಿಯ ಕಾರ್ಯಕರ್ತನ ಕೊಲೆಗೆ (Ballari Case) ಕಾಂಗ್ರೆಸ್ (Congress) ಸರ್ಕಾರ ನ್ಯಾಯ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.
ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಬಳಿ ನ್ಯಾಯ ಕೇಳಲು ಬಳ್ಳಾರಿಗೆ ಬಂದಿದ್ದೇವೆ. ಎರಡೂವರೆ ವರ್ಷದಿಂದ ಯಾರು ಆಡಳಿತ ನಡೆಸುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಗೃಹ ಸಚಿವರು ಯಾರೆಂದು ಇನ್ನೂ ತಿಳಿದಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ಕೊಡಲು ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಪ್ರತಿ ಜಿಲ್ಲೆಗಳಲ್ಲಿ ಪ್ರತ್ಯೇಕ ಗೃಹ ಸಚಿವರಿದ್ದಾರೆ. ಕಾಂಗ್ರೆಸ್ ನಾಯಕರಿಂದಾಗಿ ಅಮಾಯಕ ಕಾರ್ಯಕರ್ತ ಬಲಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ ಎಂದರು. ಇದನ್ನೂ ಓದಿ: ಡಿಕೆಶಿ ಡೆಲ್ಲಿ ಟೂರ್ ಗೇಮ್.. ಬೆಂಗಳೂರಲ್ಲೇ ಕುಳಿತು ಸಿದ್ದರಾಮಯ್ಯ ಚೆಕ್ ಮೇಟ್..! ರಾಹುಲ್ ಬಳಿ ಜಾರ್ಜ್ ಹೋಗಿದ್ದೇಕೆ..!?
ಜನವರಿ 1ರಂದು ಎಲ್ಲ ಕಡೆ ಹೊಸ ವರ್ಷದ ಆಚರಣೆಗಾಗಿ ಪಟಾಕಿ ಸಿಡಿಯುತ್ತಿದ್ದರೆ, ಬಳ್ಳಾರಿಯಲ್ಲಿ ಗುಂಡಿನ ಸುರಿಮಳೆ ಆಗುತ್ತಿತ್ತು. ಗುಂಡು ಹಾರಿಸಿದವರು ಯಾರೆಂದು ಪೊಲೀಸರಿಗೆ ಇನ್ನೂ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಕಡೆಯವರಿಂದ ಗುಂಡು ಹಾರಿದ್ದರೆ ಪೊಲೀಸರು ಪ್ರತಿ ಮನೆಗೆ ಬಂದು ಲಾಠಿ ಏಟು ಕೊಟ್ಟು ಎಲ್ಲರನ್ನೂ ಬಂಧಿಸುತ್ತಿದ್ದರು. ಕಾಂಗ್ರೆಸ್ ಕಡೆಯವರೇ ಆಗಿರುವುದರಿಂದ ಕೊಲೆ ಮಾಡಿದವರನ್ನು ಇನ್ನೂ ಬಂಧನ ಮಾಡಿಲ್ಲ. ಗುಂಡು ಹಾರಿಸಿದ್ದ ಗನ್‌ಮ್ಯಾನ್‌ನನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ. ಈ ಬಗ್ಗೆ ನಾನು ವಿಚಾರಿಸಿದಾಗ ಅಚಾನಕ್ಕಾಗಿ ಗುಂಡು ಹಾರಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ ಗುಂಡು ಹಾರಿಸಿದರೆ ಪೊಲೀಸರು ಬಿಟ್ಟುಬಿಡುತ್ತಾರೆಯೇ? ಈಗ ಕೊಲೆಗಾರರು ಬೆಂಗಳೂರಿನಲ್ಲಿ ಆರಾಮವಾಗಿ ಇದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮತ್ತೆ ದರ ಏರಿಕೆಗೆ ರೆಡಿಯಾದ BMRCL – ಸಿಎಂ, ಕೇಂದ್ರಕ್ಕೆ ತೇಜಸ್ವಿ ಸೂರ್ಯ ಪತ್ರ
ಪೊಲೀಸರು ನ್ಯಾಯ ಕೊಡಲು ವಿಫಲರಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಬಳ್ಳಾರಿಯಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಈಗ ಇಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಅಂತಹ ದಾಳಿ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕಾಗಿತ್ತು. ಜನಾರ್ದನ ರೆಡ್ಡಿಯವರ ಮೇಲೆ ದಾಳಿ ಮಾಡಲು ಬೇರೆ ಬೇರೆ ಪ್ರಯತ್ನ ನಡೆದರೂ ಕ್ರಮ ವಹಿಸಿಲ್ಲ. ಈ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಧಿಕಾರಿಗೆ ಬೆದರಿಕೆ ಹಾಕುತ್ತಾನೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲ ನೀಡುತ್ತಾರೆ. ಕುಕ್ಕರ್ ಬಾಂಬ್ ಹಾಕುವವರು, ಬೆದರಿಕೆ ಹಾಕುವವರು ಇವರಿಗೆ ಬ್ರದರ್‌ಗಳಾಗಿದ್ದಾರೆ ಎಂದರು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಗೋಮಾಳ ಒತ್ತುವರಿ ತೆರವು
ಎರಡು ವರ್ಷದ ಬಳಿಕ ಅಧಿಕಾರ ಇರುವುದಿಲ್ಲ ಎಂದು ಗೊತ್ತಾಗಿರುವುದರಿಂದಲೇ ಇಷ್ಟೆಲ್ಲ ಹಲ್ಲೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರಶ್ನೆ ಮಾಡಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಸಾಧ್ಯವಾದರೆ ಜನರಿಗೆ ಒಳಿತು ಮಾಡಬೇಕು, ಇಲ್ಲವಾದರೆ ತೊಲಗಬೇಕು. ಪೊಲೀಸರು ಜನರಿಗೆ ರಕ್ಷಣೆ ನೀಡಬೇಕು. ಆದರೆ 7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ. ಕರ್ನಾಟಕ ಪೊಲೀಸ್ ಎಂದರೆ ದೇಶಕ್ಕೆ ಮಾದರಿಯಾಗಿತ್ತು. ಆ ವ್ಯವಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪ್ರಧಾನಿ ಮೋದಿ
ಜನರು ನೆನಪಿಸಿಕೊಳ್ಳುವಂತೆ ಪೊಲೀಸರು ಕೆಲಸ ಮಾಡಬೇಕು. ಆದರೆ ಬಳ್ಳಾರಿಯಲ್ಲಿ ಹೊಸ ವರ್ಷದಲ್ಲೇ ಒಂದು ಕುಟುಂಬದಲ್ಲಿ ಸೂತಕ ಕಂಡುಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನೊಂದವರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಸುಂದರ ಹುಡುಗಿಯನ್ನ ನೋಡಿ ಸೆಳೆತಕ್ಕೊಳಗಾಗಿ ರೇಪ್ ಮಾಡ್ತಾರೆ – ಕಾಂಗ್ರೆಸ್ ಶಾಸಕ ವಿವಾದ

