ಕಾಂಗ್ರೆಸ್ ಸರ್ಕಾರ ನಾಟಕದ ಕಂಪನಿ: ಗೋವಿಂದ ಕಾರಜೋಳ

Public TV
3 Min Read

ಚಿತ್ರದುರ್ಗ: ಕಾಂಗ್ರೆಸ್ (Congress) ಸರ್ಕಾರವೊಂದು ದೊಡ್ಡಾಟ ಹಾಗೂ ಬಯಲಾಟ ಆಡುವ ನಾಟಕದ ಕಂಪನಿ ಎಂದು ಚಿತ್ರದುರ್ಗ (Chitradurga) ಸಂಸದ ಗೋವಿಂದ ಕಾರಜೋಳ (Govinda Karajola) ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ದಲಿತ ಸಮಾವೇಶ ನಡೆಸಲು ಭರದ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದನಂತರ 70 ವರ್ಷದಲ್ಲಿ 60 ವರ್ಷ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಇಂಥ ಗಿಮಿಕ್ ಬಹಳ ಮಾಡಿದ್ದಾರೆ. ಅವರಿಗೆ ಕುರ್ಚಿಕಂಟಕ ಬಂದಾಗ, ಪಕ್ಷದಿಂದ ಜನ ದೂರವಾದಾಗ, ಮತದಾರರು ಅವರನ್ನು ತಿರಸ್ಕರಿಸಿದಾಗ ಹೊಸ ನಾಟಕ ಶುರು ಮಾಡುತ್ತಾರೆ. ಹೀಗಾಗಿ ಈ ಸರ್ಕಾರ ಬಯಲಾಟ ಹಾಗೂ ದೊಡ್ಡಾಟ ಅಡುವ ದೊಡ್ದ ನಾಟಕ ಕಂಪನಿ ಎನಿಸಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Photo Gallery: ಮೈಸೂರಲ್ಲಿ ನಟ ಡಾಲಿ ಧನಂಜಯ್‌ ಮದುವೆ ಸಂಭ್ರಮ

ಈ ಹಿಂದೆ ನಾಟಕ ಆಡಲು ಹೆಚ್ಚು ಬೆಳಕು ಇರುತ್ತಿರಲಿಲ್ಲ. ಆಗ ಕಲಾವಿದರು ಕಂದಿಲ್ ಬೆಳಕಲ್ಲಿ ನಾಟಕ ನಡೆಸುತಿದ್ದರು. ಅಂತೆಯೇ ಈ ಕಾಂಗ್ರೆಸ್ ಸರ್ಕಾರವೊಂದು ದೊಡ್ಡ ನಾಟಕದ ಕಂಪನಿ. ಈಗ ಜನರಿಗೆ ಕಾಂಗ್ರೆಸ್ಸಿಗರ ಬಂಡವಾಳ ಅರ್ಥ ಆಗಿದೆ. ಅವರಿಗೆ ಅಷ್ಟೊಂದು ದಲಿತರ ಮೇಲೆ ಕಾಳಜಿಯಿದ್ದರೆ ದಲಿತರ 25 ಸಾವಿರ ಕೋಟಿ ಎಸ್ಸಿಪಿಟಿಎಸ್ ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ದಲಿತರ ಹಣಕ್ಕೆ ಕತ್ತರಿ ಹಾಕಿದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುತ್ತತ್ತಿ ದೇವಾಲಯಕ್ಕೆ ಬಂದಿದ್ದ ಇಬ್ಬರು ನೀರುಪಾಲು

ಇನ್ನು ದಲಿತರ ಸಮಾವೇಶ ನಡೆಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಆರ್ಥಿಕವಾಗಿ ಈ ಸರ್ಕಾರ ದಿವಾಳಿಯಾಗಿದೆ. ದಲಿತರ ಮೇಲೆ ಅಷ್ಟೊಂದು ಕಾಳಜಿಯಿದ್ದರೆ ಈ ಸರ್ಕಾರ ಶಿಕ್ಷಣ ಮತ್ತು ದಲಿತರ ಏಳಿಗೆಗೆ ಅನುದಾನ ಕೊಡಿಸಬೇಕು ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕನ ಬರ್ಬರ ಹತ್ಯೆ, ಆರೋಪಿ ಅರೆಸ್ಟ್‌

ರಾಜ್ಯದ 9 ವಿವಿಗಳನ್ನು ಮುಚ್ಚುತ್ತಿರೋದು ನೋಡಿದರೆ ಸರ್ಕಾರದಲ್ಲಿ ಆರ್ಥಿಕ ದಿವಾಳಿ ಎದ್ದು ಕಾಣಿಸುತ್ತಿದೆ. ಈ ಸರ್ಕಾರದ ಭೂಮಿಯನ್ನು ಕಾಂಗ್ರೆಸ್ ನುಂಗಿ ಹಾಕಿದೆ. ಹೀಗಾಗಿ ನೂರಾರು ಎಕರೆ ಜಾಗ ಕೊಟ್ಟು ವಿಶ್ವವಿದ್ಯಾಲಯ ಮುಚ್ಚದಂತೆ ಉಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಾಲಕಿ ಕಿಡ್ನ್ಯಾಪ್, ಅತ್ಯಾಚಾರ ಕೇಸ್ – ಆರೋಪಿಗೆ 20 ವರ್ಷ ಜೈಲು, 45 ಸಾವಿರ ದಂಡ

ಇದೇ ವೇಳೆ ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ದಲಿತರನ್ನು ಸಿಎಂ ಮಾಡಲ್ಲ. ದೀರ್ಘಾವಧಿ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನೇ ಸಿಎಂ ಮಾಡಲಿಲ್ಲ. ಅವರ ನರಿಗದ್ದಲ ಕೈ ನಾಯಕರಿಗೆ ಕೇಳಲ್ಲ. ಕಾಂಗ್ರೆಸ್ಸನ್ನು ದಲಿತರೆಲ್ಲಾ ಸೇರಿ ಚಿಂದಿ ಮಾಡಿದಾಗ ಅವರಿಗೆ ಬುದ್ದಿ ಬರಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೇನಲ್ಲಿ ಜೆಡಿಎಸ್‌ನಿಂದ ಬೃಹತ್ ಸಮಾವೇಶ: ಹೆಚ್‌ಡಿಡಿ

ಉದಯಗಿರಿ ಗಲಾಟೆ ಪ್ರಕರಣ ಕಂಡಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನಿಸಿದೆ. ಈ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇವಲ ಉದಯಗಿರಿ ಒಂದೇ ಅಲ್ಲ. ಹುಬ್ಬಳ್ಳಿ ಗಲಾಟೆಯಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಈ ರಾಜ್ಯದ ಪರಿಸ್ಥಿತಿ ಸರಿಯಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದ ಬಳಿಕ ನಮ್ಮ ಪೂರ್ವಜರು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅಧಿಕಾರ ನಡೆಸಿದ್ದಾರೆ. ಪೊಲೀಸ್ ಠಾಣೆ ಮೇಲೆ ಅಟ್ಯಾಕ್, ಪೊಲೀಸರ ಮೇಲೆ ದೌರ್ಜನ್ಯ ನಡೆಸಿದವರನ್ನು ಎಂದೂ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ದೇವರಾಜ್ ಅರಸುರವರ ದಾಖಲೆ ಸರಿಗಟ್ಟುತ್ತಾರೆ: ಕೆಎನ್ ರಾಜಣ್ಣ

ಇಂದು ಗೂಂಡಗಳು, ಕೋಮುವಾದಿ ಗಲಬೆ ಹುಟ್ಟಿಸಿ, ಶಾಂತಿ ಕದಡುವವರಿಗೆ ಪ್ರೋತ್ಸಾಹಿಸುವ ಸರ್ಕಾರ ಅಧಿಕಾರದಲ್ಲಿದೆ ಇದನ್ನು ಖಂಡಿಸುತ್ತೇನೆ. ಎಂಟು ದಿನಗಳ ಬಳಿಕ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ತೆರಳಿ ಸಭೆ ನಡೆಸಿದ್ದಾರೆ. ಯಾರನ್ನು ಬಿಡಲ್ಲವೆಂದು ಕೆಲವು ಪದಗಳನ್ನು ಬಳಸಿದ್ದಾರೆ. ರಾಜ್ಯದ ಗೃಹಮಂತ್ರಿ, ಡಿಸಿಎಂ, ಸಿಎಂ ಯಾರನ್ನು ಬಿಡಲ್ಲವೆಂದು ಹೇಳಿದ್ದಾರೆ. ಯಾರನ್ನು ಬಿಡಲ್ಲ ಅನ್ನೋದನ್ನು ಸಾಬೀತು ಮಾಡಿ ತೋರಿಸಬೇಕು. ಎಫ್‌ಐಆರ್‌ನಲ್ಲಿ ಸಾವಿರ ಮಂದಿ ಇದ್ದರು ಎಂಬ ಅಂಶವಿದೆ. ಸಿಸಿಟಿವಿಯಲ್ಲಿ ರೆಕಾರ್ಡ್, ಮೀಡಿಯಾ ಕ್ಯಾಮೆರಾಗಳಲ್ಲಿ 1,000 ಮಂದಿ ಇರೋದು ಸೆರೆಯಾಗಿದೆ, ಪತ್ರಿಕೆಗಳಲ್ಲಿ ವರದಿಯಾಗಿದೆ. ತಿಣುಕಾಡಿ 13 ಮಂದಿ ಬಂಧಿಸಿರುವ ನಿಮಗೆ ನಾಚಿಕೆಯಾಗಬೇಕು ಎಂದು ಗುಡುಗಿದರು. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ

ಇನ್ನು 1,000 ಮಂದಿ ನಡೆಸಿದ ಗಲಾಟೆಯಲ್ಲಿ ಜೈಲು ತುಂಬುವಷ್ಟು ಜನರನ್ನು ಬಂದಿಸಬೇಕಿತ್ತು. ಆಡಳಿತ ನಡೆಸಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಸಾರ್ವಜನಿಕರ ಬಳಿ ಕ್ಷಮೆಯಾಚಿಸುವಂತೆ ಆಗ್ರಹಿದರು. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

Share This Article